Advertisement
ಪ್ರಮೋದ್ ವೈಯಕ್ತಿಕ ಹೆಸರಿ ನಲ್ಲಿರುವ ಸ್ಥಿರ ಹಾಗೂ ಚರ ಆಸ್ತಿಗಳು ಅವರ ವ್ಯಾಪಾರದ ಆರ್ಥಿಕ ಲೆಕ್ಕಾಚಾರದಲ್ಲಿ ಕಾಣಿಸ ಲಾಗಿರುವುದರಿಂದ ವ್ಯಾಪಾರದ ಬಂಡವಾಳದ ಮೊತ್ತವನ್ನು ಆಸ್ತಿಯಾಗಿ ಕಾಣಿಸಲಾಗಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಳೆದ ಚುನಾವಣೆ ಸಂದರ್ಭ ರೇಂಜ್‌ರೋವರ್ ಸಹಿತ ಇತರ ಕಾರು, ಜೀಪು, ಟ್ರ್ಯಾಕ್ಟರ್, ಬೈಕು, ಲಾರಿ, ಟಿಪ್ಪರ್ ಮೊದಲಾದ ಸುಮಾರು 16 ವಾಹನಗಳು ಮಧ್ವರಾಜ್ ಹೆಸರಿನಲ್ಲಿಯೇ ಇತ್ತು. ಪ್ರಸ್ತುತ ರಾಜ್ ಫಿಶ್‌ಮೀಲ್ ಕಂಪೆನಿಯು ಪ್ರೊಪ್ರೈಟರ್‌ಶಿಪ್‌ನಿಂದ ಪಾಲುದಾರಿಕಾ ಸಂಸ್ಥೆ ಯಾಗಿ ಬದಲಾಗಿರುವ ಕಾರಣ ಪ್ರಮೋದ್ ಅವರಲ್ಲಿದ್ದ ಎಲ್ಲ ವಾಹನಗಳು ಪಾಲುದಾರಿಕಾ ಸಂಸ್ಥೆಯ ವ್ಯಾಪ್ತಿಯೊಳಗೆ ಬಂದಿದ್ದು, ಎಲ್ಲ ವಾಹನಗಳು ಸಂಸ್ಥೆಗೆ ಹಸ್ತಾಂತರವಾಗಿದೆ. ಆದರೂ ಕೆಲವೊಂದು ವಾಹನಗಳು ಇನ್ನೂ ಕೂಡ ಪ್ರಮೋದ್ ಅವರ ಹೆಸರಿನಲ್ಲಿಯೇ ಇದೆ. ಆ ವಾಹನಗಳ ಹೆಸರು ಬದಲಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿದೆ. ಆಸ್ತಿ ಇಳಿಕೆಯಾಗಿಲ್ಲ?
2013 ವಿಧಾನಸಭಾ ಚುನಾವಣೆಯಲ್ಲಿ 105.17 ಕೋ.ರೂ. ಇದ್ದ ಪ್ರಮೋದ್ ಆಸ್ತಿಯು ಈ ಬಾರಿ ಅವರು 78.46 ಕೋ.ರೂ. ಆಗಿದೆ. ಇದನ್ನು ಅವಲೋಕಿಸಿದಾಗ ಅವರ ಆಸ್ತಿ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿರುವುದು (ಸುಮಾರು 26.70 ಕೋ.ರೂ.) ಕಂಡು ಬರುತ್ತದೆ. ಕಳೆದ ಚುನಾವಣೆಯ ಸಂದರ್ಭ ರಾಜ್ ಫಿಶ್‌ಮೀಲ್ ಆ್ಯಂಡ್ ಆಯಿಲ್ ಕಂಪೆನಿಯು ಪ್ರಮೋದ್ ಮಧ್ವರಾಜ್ ಅವರ ಹೆಸರಲ್ಲಿತ್ತು. ಈಗ ಆ ಕಂಪೆನಿಯು ಪಾಲುದಾರಿಕಾ ಸಂಸ್ಥೆಯಾಗಿ ಬದಲಾಗಿದೆ. ಅದರ ಬಂಡವಾಳವು 33.39 ಕೋ.ರೂ. ಆಗಿದೆ. ಹಾಗಾಗಿ ವಹಿವಾಟು ಕಡಿಮೆಯಾಗಿಲ್ಲ ಎಂದು ತಿಳಿದುಬಂದಿದೆ.