Advertisement
ಈ ಬಗ್ಗೆ ಮೂಡನಿಡಂಬೂರು ಗ್ರಾಮದ ರಾಘವೇಂದ್ರ (46) ನೀಡಿದ ದೂರಿನಂತೆ ಆದರ್ಶ (32) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಮತ್ತು ದೂರುದಾರರ ನಡುವೆ ಹೊಟೇಲ್ ವ್ಯವಹಾರದ ಬಗ್ಗೆ ಒಪ್ಪಂದವಾಗಿದ್ದು, ಇದನ್ನು ರದ್ದುಪಡಿಸಿ ಆರೋಪಿ ನೀಡಿದ್ದ ಮುಂಗಡ ಹಣವನ್ನು ವಾಪಸ್ ನೀಡುವ ಬಗ್ಗೆ ಫೆ. 23ರಂದು ಮಾತುಕತೆ ನಡೆಯುತ್ತಿತ್ತು. ಈ ಸಂದರ್ಭ ಆರೋಪಿಯು ಏಕಾಏಕಿ ರೊಚ್ಚಿಗೆದ್ದು ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ರಾಘವೇಂದ್ರ ಹಾಗೂ ಇತರರ ಪಾಲುದಾರಿಕೆಯ ಹೊಟೇಲಿನ ವ್ಯವಹಾರದ ಬಗ್ಗೆ ಮಾತನಾಡಲೆಂದು ಅವರ ಕಚೇರಿಗೆ ಹೋಗಿದ್ದು, ಮುಂಗಡ ನೀಡಿದ್ದ 2 ಲಕ್ಷ ರೂ. ಅನ್ನು ವಾಪಸ್ ನೀಡುವಂತೆ ಕೇಳಿದ್ದೆ. ಆಗ ಕೋಪಗೊಂಡ ರಾಘವೇಂದ್ರ ಹಾಗೂ ಇತರರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ನನ್ನ 4 ಪವನ್ ತೂಕದ ಚಿನ್ನದ ಸರ ಹಾಗೂ 10 ಸಾ.ರೂ. ಇದ್ದ ಪರ್ಸ್ ಕಾಣೆಯಾಗಿದೆ ಎಂದು ಆದರ್ಶ್ ಆರೋಪಿಸಿದ್ದಾರೆ. ಈ ಸಂಬಂಧ ಮಂಜುನಾಥ, ರಾಘವೇಂದ್ರ, ಹೇಮಂತ್, ದಿನೇಶ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ.