ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಹತ್ವಾಕಾಂಕ್ಷಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬೃಹತ್ ಗೀತೋತ್ಸವ ತ್ರಿಪಕ್ಷ ಶತ ವೈಭವ ಕಾರ್ಯಕ್ರಮಗಳ ಅಂಗವಾಗಿ ಜಾಗತಿಕ ಆನ್‌ಲೈನ್ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧಿಗಳು ಶ್ರೀಕೃಷ್ಣ ಭಗವದ್ಗೀತೆಯನ್ನು ಸುಲಭವಾಗಿ ಮತ್ತು ಯಶಸ್ವಿಯಾಗಿ ತಿಳಿದುಕೊಳ್ಳಲು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನಗಳನ್ನು ಗೆಲ್ಲಲು ಅವಕಾಶ ಕಲ್ಪಿಸಲಾಗಿದ್ದು, ಸ್ಪರ್ಧೆಯು ಎಲ್ಲ ವಯಸ್ಸಿನವರಿಗೆ ಮುಕ್ತವಾಗಿದೆ.
ವರ್ಗ ಎ-18 ವರ್ಷಕ್ಕಿಂತ ಕೆಳಗಿನವರು, ವರ್ಗ ಬಿ-18 ವರ್ಷ ಮತ್ತು ಹೆಚ್ಚಿನ ವಯಸ್ಸಿನವರ ವರ್ಗವಿದ್ದು, ಪ್ರತಿ ವರ್ಗಕ್ಕೂ ಪ್ರಥಮ 1 ಲಕ್ಷ ರೂ., ದ್ವಿತೀಯ 75 ಸಾ. ರೂ., ತೃತೀಯ 50 ಸಾ. ರೂ., ಚತುರ್ಥ 25 ಸಾ. ರೂ. ಬಹುಮಾನ ನೀಡಲಾಗುವುದು. ಚಿಜಿಠಿ.ly/3ಘuಟಿ4s9 ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು.
ಶಾಲೆಗಳು ಮತ್ತು ವಿದ್ಯಾಪೀಠಗಳಿಂದ ಸಾಮೂಹಿಕ ನೋಂದಣಿಗಳಿಗೆ ಉಚಿತ ಪ್ರವೇಶಾವಕಾಶವಿದೆ. ಸ್ಪರ್ಧೆಯ ಮೊದಲ ಸುತ್ತು ಜ. 14ರಿಂದ 20ರ ವರೆಗೆ, ಎರಡನೇ ಸುತ್ತು ಜ. 25, ಮೂರನೇ ಸುತ್ತು ಜ. 26ರಿಂದ ಫೆ. 1ರ ವರೆಗೆ ನಡೆಯಲಿದ್ದು, ಫೆ. 6ರಂದು ಬಹುಮಾನ ವಿತರಿಸಲಾಗುವುದು ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.
ಯಾಕೆ ಪಾಲ್ಗೊಳ್ಳಬೇಕು?
ಪವಿತ್ರ ಗ್ರಂಥವನ್ನು ಓದಲು ಅವಕಾಶ, ಗೀತೆಯ ಬಗ್ಗೆ ತಿಳಿಯಲು ಸುಲಭ ಮತ್ತು ಪರಿಣಾಮಕಾರಿ ವಿಧಾನ, ಅದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶ ಲಭಿಸಲಿದೆ.