Advertisement

ಉಡುಪಿ ಅಜ್ಜರಕಾಡು: ಉದ್ಯೋಗ ಮೇಳಕ್ಕೆ  ಚಾಲನೆ

01:00 AM Jan 20, 2019 | Harsha Rao |

ಉಡುಪಿ: ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ಇದೆ. ಇದರ ಶೇ.1 ಸರಕಾರಿ ಉದ್ಯೋಗವೆನಿಸಿದರೂ 6.5 ಲಕ್ಷ ಸರಕಾರಿ ಉದ್ಯೋಗವಾಗುತ್ತದೆ. ಈಗಿರುವುದು 5 ಲಕ್ಷ ಸರಕಾರಿ ನೌಕರರು. ಪ್ರತಿ ಕಚೇರಿಗಳಲ್ಲಿ ಸುಮಾರು ಶೇ.50 ಹುದ್ದೆ ಖಾಲಿ ಇದೆ. ಇದನ್ನು ತುಂಬಿಸಲು ಗುತ್ತಿಗೆ ಆಧಾರದಲ್ಲಿ ನೇಮಕ ನಡೆಯುತ್ತದೆ. ಇದಕ್ಕೆ ಆರ್ಥಿಕ ಹೊರೆ ಕಾರಣ. ಹೀಗಿರುವಾಗ ಇದು ಅರ್ಥಗರ್ಭಿತ ಉದ್ಯೋಗ ಮೇಳದಲ್ಲಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಅನಿಸಿಕೆ. 

Advertisement

ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ., ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು, ಸಂಚಲನ ಟ್ರಸ್ಟ್‌,  ಉನ್ನತಿ ಕ್ಯಾರಿಯರ್‌ ಅಕಾಡೆಮಿಯಿಂದ ಶನಿವಾರ ಸಮಾವೇಶಗೊಂಡ ಎರಡು ದಿನಗಳ ಉದ್ಯೋಗ ಮೇಳ ಉದ್ಘಾಟನೆಗೊಂಡಿತು.

ಮೇಳವನ್ನು ಉದ್ಘಾಟಿಸಿದ ಪೂಜಾರಿಯವರು, ನಿತ್ಯ ಶಾಸಕರ ಮನೆಗಳಿಗೆ ಉದ್ಯೋಗ ಕೇಳಿಕೊಂಡು ಬರುತ್ತಾರೆ. ಅಂಗನವಾಡಿ ಕಾರ್ಯಕರ್ತೆ, ಅಡುಗೆ ಕೆಲಸದವರಿಗೆ ಕೆಲಸ ಕೊಡಿಸುವ ಸ್ಥಿತಿಯಲ್ಲಿಯೂ ನಾವಿಲ್ಲ. ಇದಕ್ಕೆ ನಿಯಮಾವಳಿ, ಮೆರಿಟ್‌, ಮೀಸಲಾತಿ ಇತ್ಯಾದಿ ಕಾರಣಗಳಿವೆ. ಗ್ರಾಮಲೆಕ್ಕಾಧಿಕಾರಿ ನೇಮಕಕ್ಕೆ ಒಂದೆಡೆ ಸಾವಿರಾರು ಅರ್ಜಿಗಳು, ಇನ್ನೊಂದೆಡೆ ಮೆರಿಟ್‌ ಕಾರಣಗಳನ್ನು ಜಿಲ್ಲಾಧಿಕಾರಿಗಳು ನೀಡುತ್ತಾರೆ. ಜನರೋ ನಮ್ಮಲ್ಲಿ ಬಂದು “ನೀವು ಡಿಸಿಗೆ ಹೇಳಿದರೆ ಆಗುತ್ತದೆಯಂತೆ’ ಎನ್ನುತ್ತಾರೆ. ಪದವೀಧರರಿಗೆ ಕನಿಷ್ಠ 15,000 – 20,000 ರೂ. ವೇತನದ ಉದ್ಯೋಗ ದೊರಕುವ ಶಕ್ತಿ ಇದ್ದಿದ್ದರೆ, ಪ್ರತಿವರ್ಷ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ 500- 1000 ಉದ್ಯೋಗ ಸೃಷ್ಟಿಸುತ್ತ ಬಂದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಮೇಳದಲ್ಲಿ 500-1,000 ಜನರಿಗೆ ಉದ್ಯೋಗ ದೊರೆತರೂ ದೊಡ್ಡ ಸಾಧನೆ ಎಂದರು. 

ಇಗ್ನೊ ಲಾಂಛನ ಬಿಡುಗಡೆ
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿ.ವಿ. (ಇಗ್ನೊà) ಲಾಂಛನ ಬಿಡುಗಡೆಗೊಳಿಸಿದ ಪ್ರಾದೇಶಿಕ ನಿರ್ದೇಶಕ ಡಾ|ವೇಣುಗೋಪಾಲ ರೆಡ್ಡಿಯವರು, ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ ಆರಂಭಿಸಿದ ವಿ.ವಿ. ಕೇಂದ್ರದಲ್ಲಿ 30 ವಿಷಯಗಳನ್ನು ಕೊಡಲಾಗುತ್ತಿದೆ. ದೇಶ- ವಿದೇಶಗಳಲ್ಲಿ 3,000 ಕೇಂದ್ರಗಳಿದ್ದು ವರ್ಷಕ್ಕೆ 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಯಾವುದೇ ಭಾಷೆಯಲ್ಲಾದರೂ ಉತ್ತಮ ಸಂವಹನ ನಡೆಸುವ ಕಲೆ ಗೊತ್ತಿರಬೇಕು ಎಂದರು. 

ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷ ದಿನಕರಬಾಬು ವಹಿಸಿದ್ದರು. ಸಂಚಲನ ಟ್ರಸ್ಟ್‌ ಸಂಚಾಲಕ ಪ್ರೇಮಪ್ರಸಾದ ಶೆಟ್ಟಿಯವರು ಮಾತನಾಡಿ, ಇಲ್ಲಿ ಬಂದಿರುವ 100 ಕಂಪೆನಿಗಳಲ್ಲಿ 8,500 ಉದ್ಯೋಗಾವಕಾಶವಿದೆ. ಇದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕಾಗಿದೆ ಎಂದರು. ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ|ರೋಶನ್‌ಕುಮಾರ್‌ ಶೆಟ್ಟಿ ಸ್ವಾಗತಿಸಿ, ವಿಜೇತಾ ಕಾರ್ಯಕ್ರಮ ನಿರ್ವಹಿಸಿದರು. ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ ಭಟ್‌, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಸೃಷ್ಟಿ ಸ್ಕಿಲ್ಸ್‌ ಪ್ರೈ.ಲಿ.,ನ ಅಕ್ಷತಾ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ರಾಮರಾಯ ಆಚಾರ್ಯ, ಪ್ಲೇಸೆ¾ಂಟ್‌ ಘಟಕದ ಅಧಿಕಾರಿ ಪ್ರೊ|ಶ್ರೀಧರ ಭಟ್‌ ಉಪಸ್ಥಿತರಿದ್ದರು. 

Advertisement

ಕೃತಕ ಉದ್ಯೋಗ ಸಮಸ್ಯೆ: ಡಿಸಿ
ಕೆಲವು ಕೆಲಸಗಳಿಗೆ ಜನರೇ ಸಿಗುತ್ತಿಲ್ಲ. ಉದಾಹರಣೆಗೆ ಕೃಷಿ ಕೆಲಸಕ್ಕೆ ಜನರ ಕೊರತೆ ಇದ್ದು ಯಾಂತ್ರೀಕರಣವನ್ನು ಅಳವಡಿಸಲಾಗುತ್ತಿದೆ.  ಕೆಲವು ಕೆಲಸಗಳನ್ನು ನಾವು ಗೌರವದಿಂದ ಕಾಣುತ್ತೇವೆ. ಕೆಲವು ಕೆಲಸಗಳಿಗೆ ಗೌರವ ಕೊಡುವುದಿಲ್ಲ. ಕೆಲಸದಲ್ಲಿ ಮೇಲೆ, ಕೆಳಗೆ ಎಂಬ ಭಾವನೆಯೇ ಇದಕ್ಕೆ ಕಾರಣ. ಪ್ರತಿಷ್ಠೆ ಮತ್ತು ಮಾಹಿತಿ ಕೊರತೆಯಿಂದ ನಿರುದ್ಯೋಗ ಸಮಸ್ಯೆ ಇದಿರಾಗಿದೆ. ಇದು ಕೃತಕ ಸಮಸ್ಯೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು. 

ಬಡತನದ ಹಿನ್ನೆಲೆಯಿಂದ ಬಂದವರೂ ಉದ್ಯೋಗವನ್ನು ಅರಸುವ ಬದಲು ಉದ್ಯೋಗವನ್ನು ಸೃಷ್ಟಿಸುತ್ತಾರೆ. ಯುವಜನತೆ ಈ ನಿಟ್ಟಿನಲ್ಲಿ ಚಿಂತನೆ, ಧೈರ್ಯ ತಾಳಬೇಕು. ಇಲ್ಲಿ ಮತದಾನದ ಹಕ್ಕು ಸಿಗುವ ನೋಂದಣಿಯನ್ನು ಮಾಡಿಸಲಾಗುತ್ತಿದೆ. ಅದನ್ನಾದರೂ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಹೇಳಿದರು.
 
ವೈಟ್‌ ಕಾಲರ್‌x ವ್ಯಾಮೋಹ!
ನಿರುದ್ಯೋಗ ಸಮಸ್ಯೆಗೆ ವೈಟ್‌ಕಾಲರ್‌x ವೃತ್ತಿ ಬೇಕೆಂಬ ವ್ಯಾಮೋಹ ಕಾರಣ. ಯಾವುದೇ ಕೆಲಸದಲ್ಲಿ ಗೌರವ ಮೂಡಿಸುವ ಮನೋಭಾವನೆ ಬರಬೇಕು ಎಂದು ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next