Advertisement

Udupi; ಗ್ಯಾಂಗ್‌ವಾರ್‌ ಬಳಿಕ ಚುರುಕಾದ ಇಲಾಖೆ : ತಡರಾತ್ರಿ ಪೊಲೀಸ್‌ ಕಾರ್ಯಾಚರಣೆ

12:12 AM May 31, 2024 | Team Udayavani |

ಮಣಿಪಾಲ: ಉಡುಪಿಯಲ್ಲಿ ನಡೆದ ಗ್ಯಾಂಗ್‌ವಾರ್‌ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ತಡರಾತ್ರಿ ಗಸ್ತು ಚುರುಕುಗೊಳಿಸಿದ್ದು, ಮಣಿಪಾಲ, ಉಡುಪಿ ಸಹಿತ ಗ್ರಾಮಾಂತರ ಭಾಗದಲ್ಲಿಯೂ ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ತಡರಾತ್ರಿ ವರೆಗೂ ನಿರಂತರ ಗಸ್ತಿನಲ್ಲಿದ್ದ ಪೊಲೀಸರು ಸಮಯ ಮೀರಿ ವಹಿವಾಟು ನಡೆಸುತ್ತಿದ್ದ ಅಂಗಡಿ, ಹೊಟೇಲ್‌, ಬಾರ್‌, ಪಬ್‌ ಮಾಲಕರಿಗೆ ಸರಿಯಾದ ಸಮಯಕ್ಕೆ ಮುಚ್ಚುವಂತೆ ಎಚ್ಚರಿಕೆ ನೀಡಿದ್ದಾರೆ. ಸಣ್ಣಪುಟ್ಟ, ಅಂಗಡಿ ಮಾಲಕರು ಪೊಲೀಸರು ನಮಗೆ ಮಾತ್ರ ಎಚ್ಚರಿಕೆ ನೀಡಿದ್ದಾರೆ. ಸಮಯ ಮೀರಿ ನಡೆಯುತ್ತಿದ್ದ ಹೊಟೇಲ್‌, ಪಬ್‌-ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸಣ್ಣಪುಟ್ಟ ಹೊಟೇಲ್‌ ಅಂಗಡಿಗಳನ್ನು ಮಾತ್ರ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಯ ಎಲ್ಲ ಕಡೆಗಳಲ್ಲಿ ಗಸ್ತು ಹೆಚ್ಚಿಸಿದ್ದು, ತಡರಾತ್ರಿ ಸಮಯ ಮೀರಿ ವಹಿವಾಟು ನಡೆಸುವ ಉದ್ಯಮಗಳನ್ನು ಪರಿಶೀಲಿಸಿ ಎಚ್ಚರಿಕೆ ನೀಡಲಾಗಿದೆ. ಸಣ್ಣಪುಟ್ಟ ಅಂಗಡಿಗಳಿಂದ ಪಬ್‌, ಬಾರ್‌ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಕಾನೂನು ಉಲ್ಲಂ ಸಿದಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಾಗಾಸಾಧುಗಳ ವೇಷದಲ್ಲಿ ಉಪಟಳ
ನಗರದಲ್ಲಿ ಇತ್ತೀಚೆಗೆ ನಾಗಸಾಧುಗಳ ವೇಷದಲ್ಲಿರುವರು ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ವಿಚಿತ್ರ ರೀತಿಯಲ್ಲಿ ಉಪಟಳ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ದಢೂತಿ ದೇಹ, ಮುಖಕ್ಕೆ ಬೂದಿ ಮೆತ್ತಿಕೊಂಡು, ವಿಕಾರ ರೀತಿಯಲ್ಲಿ ಜಡೆಯನ್ನು ಬಿಟ್ಟ ನಾಗಾಸಾಧುಗಳಂತೆ ತೋರುವ ವ್ಯಕ್ತಿಗಳು ಕಾರಿನಲ್ಲಿ ಆಗಮಿಸಿ ಅಂಗಡಿ ಎದುರು ನಿಲ್ಲಿಸಿ ಅಂಗಡಿ ಒಳಗೆ ನುಗ್ಗಿ ತಮಗೆ ಅಗತ್ಯ ಇರುವ ಸಾಮಗ್ರಿಗಳನ್ನು ತೆಗೆದುಕೊಂಡು ಹಣವನ್ನು ವಾಪಸು ನೀಡದೆ ಹಿಂದಿರುಗುವ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.

ಕಿನ್ನಿಮೂಲ್ಕಿಯಲ್ಲಿ ಎಣ್ಣೆ ಮಾರಾಟ ಮಾಡುವ ಅಂಗಡಿಗೆ ನುಗ್ಗಿದ ಇವರು ಒಂದು ಕ್ಯಾನ್‌ ತೆಂಗಿನೆಣ್ಣೆ ತೆಗೆದುಕೊಂಡು ಹೋಗಿದ್ದಾರೆ. ಈ ನಡುವೆ ವ್ಯಾಪಾರಿ ಗಲಿಬಿಲಿಗೊಂಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಒಬ್ಬರು ಗ್ರಾಹಕರ ಕಿಸೆಗೆ ಕೈಹಾಕಿ ಹಣ ಪಡೆಯಲು ಯತ್ನಿಸಿದ್ದಾರೆ. ವ್ಯಕ್ತಿಯ ವಿನಂತಿಯ ಮೇರೆಗೆ ಬಿಟ್ಟು ಕಾರಿನಲ್ಲಿ ತೆರಳಿದ್ದಾರೆ.

Advertisement

ಉಡುಪಿ, ಮಣಿಪಾಲ ಪರಿಸರದಲ್ಲಿ ಈ ರೀತಿ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಪೊಲೀಸರು ಇಂಥವರ ಬಗ್ಗೆ ನಿಗಾ ವಹಿಸುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next