Advertisement

ಉಡುಪಿ: 1,392 ಪಾಸಿಟಿವ್‌, 1 ಸಾವು; ದ.ಕ.: 888 ಮಂದಿಗೆ ಕೋವಿಡ್‌, 4 ಸಾವು

12:52 AM Jan 27, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಬುಧವಾರ 1,392 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 5,590 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 502 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ. 6,660 ಪ್ರಕರಣಗಳು ಸಕ್ರೀಯವಾಗಿವೆ.

Advertisement

ಉಡುಪಿಯಲ್ಲಿ ಹೆಚ್ಚು ಪಾಸಿಟಿವ್‌
ದಾಖಲಾದ ಪಾಸಿಟಿವ್‌ ಪ್ರಕರಣಗಳಲ್ಲಿ ಉಡುಪಿ ತಾಲೂಕಿನಲ್ಲಿ 690, ಕುಂದಾಪುರ 363, ಕಾರ್ಕಳ 337 ಹಾಗೂ ಅನ್ಯ ಜಿಲ್ಲೆಯ ಇಬ್ಬರಿಗೆ ಸೋಂಕು ಕಂಡುಬಂದಿದೆ. ಪಾಸಿಟಿವಿಟಿ ದರ ಶೇ. 24.87 ದಾಖಲಾಗಿದೆ.

ತಪಾಸಣೆ ಹೆಚ್ಚಳ
ಜಿಲ್ಲೆಯಾದ್ಯಂತ ಕೋವಿಡ್‌ ಪರೀಕ್ಷೆಯನ್ನೂ ಹೆಚ್ಚಿಸಲಾಗಿದೆ. ಬುಧವಾರ ಉಡುಪಿ ತಾಲೂಕಿನಲ್ಲಿ 3,240, ಕುಂದಾಪುರದಲ್ಲಿ 1,379, ಕಾರ್ಕಳದಲ್ಲಿ 971 ಸಹಿತ ಒಟ್ಟು 5,590 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 1,208 ಮಂದಿ ಹೋಂ ಐಸೊಲೇಶನ್‌, 158 ಮಂದಿ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ 26 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಯ 167 ವಿಶೇಷ ಬೆಡ್‌ಗಳಲ್ಲಿ ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ತೀವ್ರತೆ ಕಡಿಮೆ
ಜಿಲ್ಲೆಯಲ್ಲಿ ಪಾಸಿಟಿವ್‌ ಪ್ರಕರಣ ಹೆಚ್ಚಳ ಕಂಡರೂ ತೀವ್ರತೆ ಕಡಿಮೆಯಾಗಿದೆ. ಇತ್ತೀಚಿನ ಕೆಲದಿನಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರೂ ಹಿರಿಯರಾಗಿದ್ದು, ಅವರು ಇತರ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದರು. ಮಕ್ಕಳಲ್ಲಿ ಸೋಂಕು ಲಕ್ಷಣ ಹೆಚ್ಚಳವಾಗುತ್ತಿದ್ದರೂ ಸೂಕ್ತ ಔಷಧೋಪಚಾರಗಳಿಂದ ನಿಯಂತ್ರಣಕ್ಕೆ ಬರುತ್ತಿದೆ.

ದ.ಕ.: 888 ಮಂದಿಗೆ ಕೊರೊನಾ, 4 ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 888 ಮಂದಿಗೆ ಕೊರೊನಾ ದೃಢಪಟ್ಟಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 904 ಮಂದಿ ಗುಣಮುಖರಾಗಿದ್ದಾರೆ. 5325 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 1,731ಕ್ಕೇರಿದೆ. ಶೇ. 9.42ರಷ್ಟು ಪಾಸಿಟಿವಿಟಿ ದರ ಇದೆ.

Advertisement

ಸಾವಿನ ಪ್ರಮಾಣ ಏರಿಕೆ
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಪಾಸಿಟಿವ್‌ ಪ್ರಕರಣ ಏರಿಕೆಯ ಜತೆ ಸಾವಿನ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ. ಕಳೆದ ಒಂದು ತಿಂಗಳಿನಲ್ಲಿ 31 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಕಳೆದ ಎರಡು ದಿನಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಕೊಡಗು: 939 ಪ್ರಕರಣ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ 939 ಮಂದಿಗೆ ಕೊರೊನಾ ದೃಢಪಟ್ಟಿದೆ. 379 ಮಂದಿ ಗುಣಮುಖರಾಗಿದ್ದಾರೆ. 3,770 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 27.50ರಷ್ಟಿದೆ.

ಕಾಸರಗೋಡು: 866 ಪ್ರಕರಣ
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 866 ಮಂದಿಗೆ ಕೊರೊನಾ ದೃಢಪಟ್ಟಿದೆ. 1,096 ಮಂದಿ ಗುಣಮುಖರಾಗಿದ್ದಾರೆ. 3,587 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ 49,771 ಪ್ರಕರಣ
ಕೇರಳದಲ್ಲಿ ಬುಧವಾರ 49,771 ಮಂದಿಗೆ ಕೊರೊನಾ ದೃಢಪಟ್ಟಿದೆ. 34,439 ಮಂದಿ ಗುಣಮುಖರಾಗಿದ್ದಾರೆ. 63 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 52,281ಕ್ಕೇರಿದೆ. 3,00,556 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next