Advertisement

Udupi: 125ನೇ ಮನೆ ಪ್ರವೇಶಿಸಿದ ಗ್ರಂಥಾಲಯ ಅಭಿಯಾನ

03:40 PM Dec 01, 2024 | Team Udayavani |

ಉಡುಪಿ: ಮೊಬೈಲ್‌ ಗೀಳು, ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆಯೂ ಓದಿನ ಅಭಿರುಚಿ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡ ‘ಮನೆಯೇ ಗ್ರಂಥಾಲಯ’ ಅಭಿಯಾನ 125ನೇ ಹೆಜ್ಜೆ ಇಟ್ಟಿದೆ. ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಗ್ರಂಥಾಲಯ ಸ್ಥಾಪಿಸುವ ಈ ಉಪಕ್ರಮದ 125ನೇ ಕಾರ್ಯಕ್ರಮ ಡಿ. 2ರಂದು ಡಿಸಿ ಕಚೇರಿಯಲ್ಲಿ ನಡೆಯಲಿದೆ.

Advertisement

ಮನೆ ಮನೆಗಳಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಲು ಮನೆಯಲ್ಲೇ ಪುಟ್ಟ ಗ್ರಂಥಾಲಯ ಆರಂಭಿಸುವ ಅಭಿಯಾನ ಇದಾಗಿದೆ. ಮನೆಯವರು ಒಂದು ಪುಟ್ಟ ಕಪಾಟು ಇಲ್ಲವೇ ಜಾಗವನ್ನು ಹೊಂದಿಸಿಕೊಟ್ಟರೆ ಸಾಹಿತ್ಯ ಪರಿಷತ್‌ ವತಿಯಿಂದ 10 ಪುಸ್ತಕಗಳನ್ನು ತಂದು ಜೋಡಿಸಲಾಗುತ್ತದೆ. ಕನ್ನಡದ ವೈಚಾರಿಕ ಪುಸ್ತಕಗಳು, ಕಥೆ, ಕಾದಂಬರಿ, ಕವನ, ಧರ್ಮ, ಪುರಾಣ ಗ್ರಂಥಗಳು ಹೀಗೆ ವೈವಿಧ್ಯಮಯ ಪುಸ್ತಕಗಳ ಗುತ್ಛ ಈ ರೂಪದಲ್ಲಿ ಮನೆ ಸೇರುತ್ತದೆ. ಮನೆಯವರು ಈ ಪುಸ್ತಕಗಳನ್ನು ಓದುತ್ತಾ, ಗ್ರಂಥಾಲಯವನ್ನು ಬೆಳೆಸಬೇಕು ಎನ್ನುವುದು ಅಭಿಯಾನದ ಆಶಯ.

ಸಂಘ ಸಂಸ್ಥೆಗಳ ಸಹಕಾರ ಅಗತ್ಯ
ಮನೆಯೇ ಗ್ರಂಥಾಲಯ ಅಭಿಯಾನವನ್ನು ಕೇವಲ ತಾಲೂಕು ಮಟ್ಟಕ್ಕೆ ಸೀಮಿತಗೊಳಿಸದೆ ಜಿಲ್ಲಾ ಹಾಗೂ ರಾಜ್ಯ ವ್ಯಾಪಿಯಾಗಿ ಪ್ರಚಾರ ಮಾಡಬೇಕಿದೆ. ಇದಕ್ಕೆ ಸಂಘ ಸಂಸ್ಥೆ ಹಾಗೂ ಸ್ಥಳೀಯಾಡಳಿತ ಸರಕಾರಗಳ ಸಹಕಾರ, ಪ್ರೋತ್ಸಾಹ ಅಗತ್ಯವಿದೆ.
– ರವಿರಾಜ್‌ ಎಚ್‌.ಪಿ., ಅಧ್ಯಕ್ಷರು, ಕಸಾಪ ಉಡುಪಿ ತಾಲೂಕು ಘಟಕ

ಕಸಾಪದ 3 ಹೆಗ್ಗಳಿಕೆಗಳು
– ಕಥೆ ಕೇಳ್ಳೋಣ: ಮಣಿಪಾಲ ಬಾನುಲಿ ಕೇಂದ್ರದ ಸಹಕಾರದಲ್ಲಿ ಕಥೆಗಾರರ ಮೂಲಕ ಕಥೆ ಹೇಳಿಸುವುದು. 135ನೇ ಕಾರ್ಯಕ್ರಮ ನಡೆಯುತ್ತಿದೆ.
– ಕನ್ನಡ ಮಾತಾಡು: ಹೊರ ರಾಜ್ಯದಿಂದ ಬರುವ ಬ್ಯಾಂಕ್‌, ಕಾರ್ಮಿಕರಿಗೆ ವ್ಯಾವಹಾರಿಕ ಕನ್ನಡ ಕಲಿಸುವ ಅಭಿಯಾನ. 30 ಮಂದಿಗೆ ಕಲಿಸಲಾಗಿದೆ.
– ಮನೆಯೇ ಗ್ರಂಥಾಲಯ: ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿ ಓದಿನ ಅಭಿರುಚಿ ಹೆಚ್ಚಿಸುವ ಪ್ರಯತ್ನ. ಡಿಸಿ ಕಚೇರಿಯಲ್ಲಿ 125ನೇ ಗ್ರಂಥಾಲಯ ಆರಂಭವಾಗಲಿದೆ.

-ವಿಜಯಕುಮಾರ್‌ ಹಿರೇಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next