Advertisement
ಪ್ರಸ್ತುತ ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಎಡರಂಗದ ಭದ್ರ ಕೋಟೆಗೆ ಯುಡಿಎಫ್, ಎನ್‌ಡಿಎ ಲಗ್ಗೆ ಹಾಕಬಹುದೇ ಎಂಬುದೇ ಕುತೂಹಲ.ಪಯ್ಯನ್ನೂರು ವಿಧಾನಸಭಾ ಕ್ಷೇತ್ರ ರಚನೆಯ ಬಳಿಕ ವಿಧಾನಸಭಾ ಚುನಾವಣೆಯಲ್ಲೂ, ಲೋಕಸಭಾ ಚುನಾವಣೆಯಲ್ಲೂ ಎಡರಂಗದ್ದೇ ಪಾರುಪತ್ಯ. ಕಳೆದ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ ಪಿ.ಕರುಣಾಕರನ್ ಗೆಲುವಿಗೆ ಪಯ್ಯನ್ನೂರು ಮತ್ತು ಕಲ್ಯಾಶೆÏàರಿ ಕ್ಷೇತ್ರದಲ್ಲಿ ಪಡೆದ ಬಾರೀ ಮುನ್ನಡೆ ಕಾರಣವಾಗಿತ್ತು. 1965 ರಲ್ಲಿ ಪಯ್ಯನ್ನೂರು ವಿಧಾನಸಭಾ ಕ್ಷೇತ್ರ ರಚನೆಯಾಯಿತು. ಆ ಬಳಿಕ ಈ ಕ್ಷೇತ್ರ ಎಡರಂಗದ ಭದ್ರಕೋಟೆಯಾಗಿ ಗುರುತಿಸಿಕೊಂಡಿತು. 1965, 1967, 1970ರಲ್ಲಿ ಎ.ವಿ. ಕುಂಞಂಬು, 1977, 1980 ರಲ್ಲಿ ಸುಬ್ರಹ್ಮಣ್ಯ ಶೆಣೈ, 1982ರಲ್ಲಿ ಎಂ.ವಿ. ರಾಘವನ್, 1987, 1991ರಲ್ಲಿ ಸಿ.ಪಿ. ನಾರಾಯಣನ್ ಗೆಲುವು ಸಾಧಿಸಿದ್ದರು. 1996 ರಲ್ಲಿ ಪಿಣರಾಯಿ ವಿಜಯನ್ ಕಾಂಗ್ರೆಸ್‌ನ ಕೆ.ಎನ್. ಕಣ್ಣೋತ್ ಅವರನ್ನು 28,078 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಒಟ್ಟು ಮತಗಳು – 1,63,829
ಒಟ್ಟು ಮತದಾನ – 1,38,707
ಶೇ. ಮತದಾನ 84.66
ಎಲ್‌ಡಿಎಫ್ – 75,167
ಯುಡಿಎಫ್ – 47,025
ಎನ್‌ಡಿಎ – 12,878
ಬಹುಮತ – 28,142
2016 ರ ವಿಧಾನಸಭಾ ಚುನಾವಣೆ
ಒಟ್ಟು ಮತದಾರರು -1,73,799
ಒಟ್ಟು ಮತದಾನ – 1,43,442
ಶೇ. ಮತದಾನ 82.53
ಎಲ್‌ಡಿಎಫ್ – 83,226
ಯುಡಿಎಫ್ – 42,963
ಎನ್‌ಡಿಎ – 15,341
ಬಹುಮತ – 40,263
- ಪ್ರದೀಪ್ ಬೇಕಲ್