ಮುಂಬಯಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಮ್ಮ ಬೆನ್ನಿಗೆ ಚೂರಿ ಹಾಕಿದರು. ಹಾಗಾಗಿ ನಾವು ಸೇಡು ತೀರಿಸಿಕೊಳ್ಳಬೇಕಿತ್ತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರದ ಪರಿಸ್ಥಿತಿಗೆ ಅನುಗುಣವಾಗಿ ಶಿವಸೇನೆಯ ಶಿಂಧೆ ಬಣದೊಂದಿಗೆ ಕೈಜೋಡಿಸಿ ಸರಕಾರ ರಚಿಸಲಾಯಿತು. ನಾವು ಅಧಿಕಾರಕ್ಕಾಗಿ, ದುರಾಸೆಗಾಗಿ ಅವರೊಂದಿಗೆ ಕೈಜೋಡಿಸಿದ್ದೇವೆ ಎಂದು ಯಾರೂ ಹೇಳಬಾರದು ಎಂದು ನಾನು ಸರಕಾರದಿಂದ ಹೊರಗುಳಿಯಲು ನಿರ್ಧರಿಸಿದೆ.
ಬಿಜೆಪಿ ಉನ್ನತ ನಾಯಕರು, “ನಿಮ್ಮ ಅನುಭವ ಸರಕಾರ ನಡೆಸಲು ಬೇಕು. ನೀವು ಸರಕಾರದ ಭಾಗವಾಗಬೇಕು’ ಎಂದು ಹೇಳಿದರು. ಹಾಗಾಗಿ ಡಿಸಿಎಂ ಆದೆ’ ಎಂದು ವಿವರಿಸಿದರು.