Advertisement
ತರಬೇತಿ ವಿವರಆಯ್ದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ನೀಡುವುದಲ್ಲದೆ, ನಾಲ್ಕು ತಿಂಗಳಿಗೊಮ್ಮೆ ಕಾರ್ಯಾಗಾರ ನಡೆಸಲಾಗುವುದು. ವಾರದಲ್ಲಿ ಅವರು ಇರುವ ಸುತ್ತಲಿನ ಪ್ರದೇಶದಲ್ಲೇ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಮಾಡಲು ಅವಕಾಶ ನೀಡಲಾಗುವುದು. ಆ ಮೂಲಕ ಅವರಿಗೆ ವರದಿಗಾರಿಕೆಯಲ್ಲದೆ, ವರ್ಷದಲ್ಲಿ ಒಂದು-ಎರಡು ಬಾರಿ ಸುದ್ದಿಮನೆಯಲ್ಲೂ (ಡೆಸ್ಕ್) ಕೆಲಸ ಮಾಡಲು ಅವಕಾಶ ಕಲ್ಪಿಸಲಾಗುವುದು. ತರಬೇತಿ ಮುಗಿದ ಮೇಲೆ ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಯ ಪ್ರಮಾಣಪತ್ರ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದವರಿಗೆ ಅವಕಾಶವಿದ್ದಲ್ಲಿ ‘ಉದಯವಾಣಿ’ಯಲ್ಲೇ ಪರಿಗಣಿಸಲಾಗುವುದು.
ಈ ಸಂಬಂಧ ಸೆಪ್ಟಂಬರ್ 19ರಂದು ಕಿರು ಪರೀಕ್ಷೆ ನಡೆಯಲಿದೆ. ಸುಳ್ಯ ಮತ್ತು ಪುತ್ತೂರು ಭಾಗದವರಿಗೆ ಪುತ್ತೂರಿನಲ್ಲಿ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಗ್ರಾಮಾಂತರ ಹಾಗೂ ಮಂಗಳೂರಿನವರಿಗೆ ಮಂಗಳೂರಿನಲ್ಲಿ; ಉಡುಪಿ, ಕಾರ್ಕಳದವರಿಗೆ ಉಡುಪಿಯಲ್ಲಿ ಹಾಗೂ ಕುಂದಾಪುರದವರಿಗೆ ಕುಂದಾಪುರದಲ್ಲಿ ಪರೀಕ್ಷೆ ನಡೆಯಲಿದೆ. ಬೆಳ್ತಂಗಡಿ ಮತ್ತು ಬಂಟ್ವಾಳದವರು ಪುತ್ತೂರಿನಲ್ಲೂ ಪರೀಕ್ಷೆ ಬರೆಯಲು ಅವಕಾಶವಿದೆ. ಆಸಕ್ತರು ತಮ್ಮ ಹೆಸರು, ಊರು, ಓದುತ್ತಿರುವ ಕೋರ್ಸ್-ವರ್ಷ, ಕಾಲೇಜಿನ ಹೆಸರು, ಸಂಪರ್ಕ ಸಂಖ್ಯೆ ಹಾಗೂ ಇ-ಮೇಲ್ ಐಡಿ ಈ ವಾಟ್ಸ್‌ಆಪ್ ನಂಬರ್‌ಗೆ 99641 69554ಗೆ ಅಥವಾ ಇಮೇಲ್ usjp@udayavani.com ಗೆ ಸೆ. 5ರೊಳಗೆ ಕಳುಹಿಸಬೇಕು.