Advertisement

ಮುಂದಿನ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ

02:44 PM Sep 13, 2021 | Shreeraj Acharya |

ಸಾಗರ: ಮುಂದಿನ ವರ್ಷದಿಂದ ‌ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದ್ದು ಅದರ ಅನ್ವಯ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲಾಗುವುದು. ಪ್ರತಿ ಪಂಚಾಯ್ತಿಗೆ ಒಂದರಂತೆ ಕೆಪಿಎಸ್‌ ಶಾಲೆಆರಂಭಿಸಲು ಸಿದ್ಧತೆ ನಡೆಸ‌ಲಾಗುತ್ತಿದೆ. ಕೊರೊನಾ ನಂತರ ‌ ಆರನೇ ತರಗತಿಯಿಂದ ಶಾಲೆ ಪ್ರಾರಂಭವಾಗಿದ್ದು ಶಾಲಾ ಮಕ್ಕಳಿಂದ ಯಾವುದೇ ಸೋಂಕು ಹರಡಿರುವ ಪ್ರಕ‌ರಣ ಕಂಡುಬಂದಿಲ್ಲ. ತಜ್ಞರ ‌ ವರದಿ ಆಧರಿಸಿ ಸದ್ಯದಲ್ಲೇ ಎಲ್ಲಾ ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವೆ  ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

ತಾಲೂಕಿನ ತ್ಯಾಗರ್ತಿ ಸಮೀಪದ‌ ಸಂಪಳ್ಳಿ, ನೀಚಡಿ ಗ್ರಾಮಕಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ‌ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಶಿಕ್ಷಣದಲ್ಲಿ ಬದಲಾವಣೆ ತರಲು ಕರ್ನಾಟಕ ‌ದಿಂದಲೇ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉಲಿದ  ರಾಜ್ಯಗಳಿಗೆ ಹೋಲಿಸಿದರೆ ಕ ‌ರ್ನಾಟಕದಲ್ಲಿ ಶಿಕ್ಷಣ ಪದ್ದತಿ ಉತ್ತಮವಾಗಿದೆ ಎಂದರು.

ಹಿಂದೆ ಗ್ರಾಮಾಂತರ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದಕಾಲದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ವಶಿಕ್ಷಣ ಅಭಿಯಾನ ಜಾರಿಗೆ ತಂದು ಹಳ್ಳಿ- ಹಳ್ಳಿಗ ‌ಳಲ್ಲಿಶಾಲೆತೆರೆದು ‌ಪ್ರತಿಯೊಬ್ಬರೂ ಶಾಲೆಗೆ ಹೋಗುವಂತಾಯಿತು. ಅದಕ್ಕೂ ಮೊದಲು ರಾಮಕೃಷ್ಣ  ಹೆಗಡೆ ಮತ್ತು ಗೋವಿಂದೇಗೌಡರು ಮೂಲ ಸೌಕರ್ಯ ಅಭಿವೃದ್ಧಿಪಡಿಸಿದ ಸಂಸ್ಥೆಗಳಿಗೆ ಖಾಸಗಿ ಶಾಲೆ ತೆರೆಯಲು ಅವಕಾಶ ನೀಡಿದ ‌ಸರ್ಕಾರದ‌ ಅನುದಾನ ‌ ನೀಡಲಾಯಿತು. ಹಾಗೆಯೇ ಕಾಲಕ್ಕೆ  ತಕ್ಕಂತೆ ಶಿಕ್ಷ‌ಣ ಕ್ಷೇತ್ರದಲ್ಲೂ ಬದಲಾವಣೆ ತರಲು ಯೋಜನೆಗಳನ್ನು ರೂಪಿಸಲಾಯಿತು. ಇದರಿಂದಾಗಿ ಅಂದಿನ ‌ ಮಕ್ಕಳು ಉನ್ನತ ಮಟ್ಟಕ್ಕೆ ಬರಲು ಕಾರಣವಾಯಿತು ಎಂದು ಹೇಳಿದರು. ಶಿಕ್ಷಣ ಸಚಿವರು ಬೆಳಗ್ಗೆ ಸಂಪಳ್ಳಿ ಗ್ರಾಮದ  ಮನೆಯಲ್ಲಿ ಉಪಾಹಾರ ಸೇವಿಸಿ ಸಂಪಳ್ಳಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದರು. ನೀಚಡಿ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಬೇಟಿ ನೀಡಿ ನೀಚಡಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದರು. ತ್ಯಾಗರ್ತಿಯ ವಿವೇಕಾನಂದ ಪ್ರೌಢಶಾಲೆ, ಲಿಟ್ಲ ಫವರ್‌ ಸ್ಕೂಲ್‌ ಆಯಿತು ಹೆಗ್ಗೊಡಿನ ‌ ವಿಸಂ ಪ್ರೌಢಶಾಲೆಯ ಪದಾ ಧಿಕಾರಿಗಳು ‌ಸಚಿವ‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next