ಕುಂದಾಪುರ: ಉದಯವಾಣಿಯು ಸೋಮವಾರ ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇ ಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶೈಕ್ಷಣಿಕ ಆಯ್ಕೆ ಕುರಿತ ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಎಂಬ ಕಾರ್ಯಕ್ರಮ ಆಯೋಜಿಸಿತ್ತು.
ಉಡುಪಿಯ ಪ್ರಾಧ್ಯಾಪಕ ಡಾ| ಶಿವಾನಂದ ನಾಯಕ್, ತೆಂಕ ನಿಡಿಯೂರು ಸ.ಪ್ರ.ದ. ಕಾಲೇಜು ಸಹ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ, ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಮಾಹಿತಿ ನೀಡಿದರು. ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಉದ್ಘಾಟಿಸಿದರು . ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲ ಡಾ| ಜಿ.ಎಂ. ಗೊಂಡ ಸ್ವಾಗತಿಸಿದರು.
ಕಾರ್ಯಾಗಾರಕ್ಕೆ ಆಗಮಿಸಿದ್ದ ಎಸೆಸೆಲ್ಸಿಯಲ್ಲಿ 625 ಪೂರ್ಣಾಂಕ ಪಡೆದ ಕಾಳಾವರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿಶಾ ಅವರನ್ನು ಅಭಿ ನಂದಿಸಲಾಯಿತು. ಬಾರ್ಕೂರು, ಕಾಳಾವರ, ಕೋಟೇಶ್ವರ, ಕುಂದಾಪುರ, ನಾಗೂರು, ಶಿರೂರು, ಕೋಟ, ಬಸ್ರೂರು, ತೆಕ್ಕಟ್ಟೆ, ಉಪ್ಪುಂದ, ನಾಡ ಮೊದಲಾದ ಊರಿನ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರು.