Advertisement

ಓದುಗರಿಗೆ ಪಾಲ್ಗೊಳ್ಳಲು ಅವಕಾಶ ನೀಡಿದ “ಉದಯವಾಣಿ’ಯ ಕ್ರಮ ಶ್ಲಾಘ್ಯ: ಭಾಗೀರಥಿ ರಾವ್‌

08:44 PM Nov 22, 2021 | Team Udayavani |

ಕುಂದಾಪುರ: ದುಷ್ಟಶಿಕ್ಷಣ ಶಿಷ್ಟ ರಕ್ಷಣ ಎಂದು ದುರ್ಗೆ ಒಂಬತ್ತು ಅವತಾರಗಳಲ್ಲಿ ದುಷ್ಟ ಸಂಹಾರ ಮಾಡಿದ್ದು ಅದರ ನೆನಪಿಗಾಗಿ ನವರಾತ್ರಿ ಸಂದರ್ಭ “ನವ ರೂಪ’ ಎಂಬ ಕಾರ್ಯಕ್ರಮ ಮೂಲಕ ಓದುಗರಿಗೆ ಪಾಲ್ಗೊಳ್ಳಲು ಅವಕಾಶ ನೀಡಿದ “ಉದಯವಾಣಿ’ಯ ಕ್ರಮ ಶ್ಲಾಘ್ಯ.

Advertisement

ಪಾಲ್ಗೊಂಡವರನ್ನು ಪ್ರೋತ್ಸಾಹಿಸುವ ಸಲುವಾಗಿ ಬಹುಮಾನಗಳನ್ನು ಕೂಡ ನೀಡಲಾಗುತ್ತಿದೆ. ಇದು ಓದುಗರಿಗೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ನೃತ್ಯವಿದುಷಿ ಭಾಗೀರಥಿ ಎಂ. ರಾವ್‌ ಹೇಳಿದರು.

ನವರಾತ್ರಿ ಸಂದರ್ಭ “ಉದಯವಾಣಿ’ ಆಯೋಜಿಸಿದ “ನವರೂಪ’ ಕಾರ್ಯಕ್ರಮದ ಅದೃಷ್ಟಶಾಲಿಗಳಿಗೆ ಸೋಮವಾರ ಇಲ್ಲಿನ “ಉದಯವಾಣಿ’ ಕಚೇರಿಯಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಉಪಾಧ್ಯಕ್ಷ ರಾಮಚಂದ್ರ ಮಿಜಾರ್‌ ಮಾತನಾಡಿ, ಪ್ರತಿ ದಿನ ಒಟ್ಟು 400ರಷ್ಟು ಫೋಟೊಗಳನ್ನು ಪ್ರಕಟಿಸಲಾಗುತ್ತಿತ್ತು. 40 ಸಾವಿರಕ್ಕಿಂತ ಅಧಿಕ ಮಂದಿ ಇದರಲ್ಲಿ ಭಾಗ ವಹಿಸಿದ್ದಾರೆ. ಹಬ್ಬ ಅಂದರೆ ಸಂಭ್ರಮ, ಸಡಗರ. ಅದರಲ್ಲೂ ಮಹಿಳೆಯರು ಆಹಾರ, ವಿಹಾರ, ಉಡುಗೆ- ತೊಡುಗೆ, ಧಾರ್ಮಿಕ ಕಾರ್ಯ ಹೀಗೆ ಎಲ್ಲದರಲ್ಲೂ ಹೆಚ್ಚು ಸಂಭ್ರಮಿಸುತ್ತಾರೆ. ಎಲ್ಲ ಮನೆ ಗಳಲ್ಲಿ ಧಾರ್ಮಿಕ ಆಚರಣೆ ನಡೆಸಲು ಸಾಧ್ಯವಾಗುವುದಿಲ್ಲ. ಕಚೇರಿ, ಕೆಲಸ ಕಾರ್ಯದ ಒತ್ತಡ ಗಳಿರುತ್ತವೆ. ಈ ನಿಟ್ಟಿನಲ್ಲಿ ಪ್ರತಿ ಯೊಬ್ಬರಿಗೂ ಹಬ್ಬದ ಸಂಭ್ರಮ ದಲ್ಲಿ ಭಾಗಿಯಾಗುವ ಅವಕಾಶ ದೊರೆಯಬೇಕೆಂದು “ನವರೂಪ’ ಆಯೋಜಿಸಲಾಗಿತ್ತು. ಇದರಲ್ಲಿ ಎಲ್ಲ ವರ್ಗದ ಜನರೂ ಭಾಗವಹಿ ಸಿದ್ದಾರೆ. ಇದು ಸ್ಪರ್ಧೆಯಲ್ಲ, ಇಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಇದನ್ನೂ ಓದಿ:ವಿಜಯಪುರ: ಪಕ್ಷೇತರ ಸ್ಪರ್ಧೆಯ ಭೀತಿ; ಸುನಿಲ ಗೌಡಗೆ ಕಾಂಗ್ರೆಸ್ ಟಿಕೇಟ್

Advertisement

ಕೋಟೇಶ್ವರ ಗೋಪಾಡಿಯ ಭಾಗ್ಯಲಕ್ಷ್ಮೀ ಎಸ್‌., ಧನ್ಯ ಮತ್ತು ಬಳಗ, ಅಮೃತಾ ಮತ್ತು ಗೆಳತಿಯರು ಕುಂದಾಪುರ ತಂಡದ ಪರವಾಗಿ ಸಾವಿತ್ರಿ, ಮಧ್ದೋಡಿ ಮನೆ ಮಯ್ನಾಡಿ ಪರವಾಗಿ ಮಂಜುಳಾ, ಎಸ್‌ಎಲ್‌ವಿ ಚೆಂಡೆ ಬಳಗ ಉಪ್ಪುಂದ ಪರವಾಗಿ ರಾಧಿಕಾ ಭಂಡಾರ್ಕರ್‌ ಬಹುಮಾನ ಪಡೆದರು. ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಯಿತು. ಬಹುಮಾನ ಪಡೆದ ಅದೃಷ್ಟಶಾಲಿಗಳು “ಉದಯವಾಣಿ’ ಆಯೋಜಿಸಿದ “ನವರೂಪ’ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಉಡುಪಿ ಜಿಲ್ಲಾ ಮುಖ್ಯಸ್ಥ ರಾಧಾಕೃಷ್ಣ ಭಟ್‌, ಕುಂದಾಪುರ ವಿಭಾಗದ ಕೃಷ್ಣಮೂರ್ತಿ ಹೊಳ್ಳ, ಪ್ರಸರಣ ವಿಭಾಗದ ವಿಶ್ವನಾಥ್‌ ಉಪಸ್ಥಿತರಿದ್ದರು.

ಸಂಪಾದಕೀಯ ವಿಭಾಗದ ಲಕ್ಷ್ಮೀ ಮಚ್ಚಿನ ನಿರ್ವಹಿಸಿ, ಪ್ರಶಾಂತ್‌ ಪಾದೆ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next