Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:05 AM Jul 20, 2022 | Team Udayavani |

ಮೇಷ:

Advertisement

ಸರಕಾರಿ ವ್ಯವಹಾರಗಳಲ್ಲಿ ಪ್ರಗತಿ. ಹಿರಿಯರಿಗೆ ಸಂತೋಷ ನೀಡಿದ ತೃಪ್ತಿ. ಸಮಾಜದಲ್ಲಿ ಗೌರವ ಪ್ರಾಪ್ತಿ. ಸ್ವಸಾಮರ್ಥಯದಿಂದ ಧನಾರ್ಜನೆ. ಮಕ್ಕಳ ಸಾಧನೆಯಿಂದ ನೆಮ್ಮದಿ. ಸುದೃಢ ಆರೋಗ್ಯಕ್ಕಾಗಿ ಸರಿಯಾದ ನಿಯಮ ಪಾಲನೆ ಅಗತ್ಯ.

 ವೃಷಭ:

ಸುಪುಷ್ಟವಾದ ದೈಹಿಕ ಮಾನಸಿಕ ಆರೋಗ್ಯ. ಜನರಿಂದ ಮಾನ್ಯತೆ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ಆಸ್ತಿ ವಿಚಾರದಲ್ಲಿ ಪ್ರಗತಿ. ಬಂಧು ಮಿತ್ರರ ಸಹಕಾರ. ದಾಂಪತ್ಯ ಸುಖ ವೃದ್ಧಿ. ಮಕ್ಕಳ ಪ್ರಗತಿ ವಿಚಾರದಲ್ಲಿ ಧನವ್ಯಯ ಸಂಭವ.

ಮಿಥುನ:

Advertisement

ಗುರುಹಿರಿಯರಿಂದ ಸರ್ವವಿಧದ ಸುಖ ಪ್ರಾಪ್ತಿ. ದೈರ್ಯ ಪರಾಕ್ರಮದಿಂದ ಕೂಡಿದ ಕಾರ್ಯ ವೈಖರಿ. ದಾನ ಧರ್ಮದಲ್ಲಿ ಆಸಕ್ತಿ. ಸಂದರ್ಭಕ್ಕೆ ಸರಿಯಾಗಿ ವಿವೇಕದ ನಡೆ ನುಡಿ. ಉತ್ತಮ ಬಂಧು ಮಿತ್ರರಿಂದ ಕೂಡಿದ ಸುಖ. ಧಾರ್ಮಿಕ ಕೆಲಸದ ತೃಪ್ತಿ.

 ಕರ್ಕ:

ಲೋಕ ಪ್ರಿಯತೆ. ದೇವತಾ ಭಕ್ತಿ ವೃದ್ಧಿ. ಚತುರ ನಡೆ ನುಡಿ. ನಿರೀಕ್ಷೆಗೂ ಮೀರಿದ ಸಂಪತ್ತಿನ ವೃದ್ಧಿ. ಕುಟುಂಬದವರಿಂದ ಪ್ರೋತ್ಸಾಹ. ಮನೆಯಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಅಭಿವೃದ್ಧಿ.

ಸಿಂಹ:

ಆರೋಗ್ಯ ಸ್ಥಿರ ವೃದ್ಧಿ. ಸರ್ವ ಸಾಮರ್ಥಯ ಲೋಕ ಪ್ರಸಿದ್ಧ. ಜನ ಮನ್ನಣೆ. ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ. ದೀರ್ಘ‌ ಪ್ರಯಾಣ ಸಂಭವ. ಅಧ್ಯಯನದಲ್ಲಿ ಆಸಕ್ತಿ. ಉತ್ತಮ ಧನಾರ್ಜನೆ. ಧನ ಸಂಪತ್ತಿನ ವೃದ್ಧಿ.

ಕನ್ಯಾ:

ದೈಹಿಕ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ. ವ್ಯರ್ಥವಾಗಿ ಧನವ್ಯಯವಾಗ ದಂತೆ ಜಾಗ್ರತೆ ವಹಿಸಿ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖ ತೃಪ್ತಿದಾಯಕ. ಆಸ್ತಿ ವಿಚಾರದಲ್ಲಿ ಪ್ರಗತಿ.

ತುಲಾ:

ಸ್ವಂತ ಪರಿಶ್ರಮ ಬುದ್ದಿವಂತಿಕೆಯಿಂದ ಕೂಡಿದ ಕಾರ್ಯ ವೈಖರಿಯಲ್ಲಿ ಸಫ‌ಲತೆ. ಗಣ್ಯರಿಂದ ಮನ್ನಣೆ. ಆತ್ಮೀಯರಿಗೆ ಪ್ರೀತಿ ಪಾತ್ರರಾಗುವ ಸಂದರ್ಭ. ಸಾಂಸಾರಿಕ ಸುಖ ವೃದ್ಧಿ. ಭೂಮ್ಯಾದಿ ವಿಚಾರಗಳಲ್ಲಿ ವಿಳಂಬ. ಮಕ್ಕಳಿಂದ ಸುಖ ಸಂತೋಷ.

ವೃಶ್ಚಿಕ:

ದೈರ್ಯ ಪರಾಕ್ರಮ ಶೌರ್ಯದಿಂದ ಕೂಡಿದ ಚಟುವಟಿಕೆ. ಸ್ವಾಭಿಮಾನ ಗುಣದಿಂದ ಗೌರವ ಆದರಾದಿ ಸುಖ ವೃದ್ಧಿ. ಸಣ್ಣ ಸಂಚಾರ ಸಂಭವ. ಗೃಹದಲ್ಲಿ ಸಂತಸದ ವಾತಾವರಣ. ಗುರು ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.

ಧನು:

ಪ್ರಯಾಣದಿಂದ ದೇಹಾಯಾಸ ಸಂಭವ. ದೂರದ ವ್ಯವಹಾರಗಳಿಂದ ಧನಾರ್ಜನೆ ವೃದ್ಧಿ. ದಾಂಪತ್ಯ ಸುಖ ತೃಪ್ತಿದಾಯಕ. ಅಧ್ಯಯನ ಪ್ರವೃತ್ತರಿಗೆ ಉತ್ತಮ ವಾತಾವರಣ ನಿರ್ಮಾಣ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. .

 ಮಕರ:

ನಾಯಕತ್ವ ಗುಣ ವೃದ್ಧಿ. ಸಹೋದರ ಸಮಾನರಿಂದ ಸಂದಭೋìಚಿತ ಸಹಾಯ ಸಹಕಾರ. ಪ್ರಯಾಣದಿಂದ ಲಾಭ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಸಮಯ. ಉತ್ತಮ ಧನಾರ್ಜನೆ.

ಕುಂಭ:

ಅಧ್ಯಯನ ಶೀಲತೆ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ ಆದರೂ ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ನಿರ್ಣಯಿಸಿ. ಗೃಹೋಪಕರಣ ವಸ್ತು ಸಂಗ್ರಹ. ಗುರುಹಿರಿಯರ ಆರೋಗ್ಯ ವೃದ್ಧಿ. ಬಂಧು ಮಿತ್ರರ ಸಹಕಾರಿಂದ ಕಾರ್ಯ ಸಫ‌ಲತೆ.

ಮೀನ:

ಮಾನಸಿಕ ಸಂತುಷ್ಟತೆಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ. ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಸಹೋದರಾದಿ ವರ್ಗದವರಿಂದ ಸಹಾಯ. ದಾಂಪತ್ಯ ಸುಖ ವೃದ್ಧಿ. ಮನೆಯಲ್ಲಿ ಮಕ್ಕಳಿಂದ ಸಂತೋಷದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next