Advertisement

ಓದುಗರ ಜತೆಗೆ ಸೌಹಾರ್ದ ಬೆಸುಗೆ: ಡಾ|ಸಂಧ್ಯಾ ಎಸ್‌. ಪೈ

11:42 PM Jan 11, 2023 | Team Udayavani |

ಮಂಗಳೂರು: ಉದಯವಾಣಿ ಓದುಗರು ಒಂದು ಕುಟುಂಬ. ಪ್ರೀತಿ ನಂಬಿಕೆಯಿಂದ ಎರಡೂ ಸಂಬಂಧಗಳು ಬೆಸೆದುಕೊಂಡಿವೆ. ಓದುಗರ ಜತೆಗಿನ ಸೌಹಾರ್ದ ಸಂಬಂಧದ ಕಾರ್ಯಕ್ರಮದ ಮೂಲಕ ಹೊಸ ಬೆಳಕು ರೂಪುಗೊಳ್ಳಲು ಸಾಧ್ಯ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ ಹೇಳಿದರು.

Advertisement

ಉದಯವಾಣಿ ದೀಪಾವಳಿ ಧಮಾಕ 2022 ಸ್ಪರ್ಧೆಯಲ್ಲಿ ವಿಜೇತರಾದ ಅದೃಷ್ಟಶಾಲಿಗಳಿಗೆ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಎಸ್‌.ಎಲ್‌.ಶೇಟ್‌ ಡೈಮಂಡ್‌ ಹೌಸ್‌ನಲ್ಲಿ ಬುಧವಾರ ನಡೆದ ಬಹುಮಾನ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಆತ್ಮೀಯ ವಾತಾವರಣ
ಬಹುತೇಕ ಸಮಾರಂಭಗಳಲ್ಲಿ ಕಾರ್ಯಕ್ರಮ ಆಯೋಜಿಸುವವರು, ಅತಿಥಿಗಳು ಮತ್ತು ಪಾಲ್ಗೊಳ್ಳುವವರ ನಡುವೆ ಪರಸ್ಪರ ಸಂಬಂಧಗಳೇ ಇರುವುದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಆತ್ಮೀಯವಾದ ವಾತಾವರಣ ಕಂಡುಬರುತ್ತದೆ ಎಂದರು.

ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಸಂಸ್ಥೆ 75 ವರ್ಷ ಪೂರೈಸುವುದೆಂದರೆ, ಜನರು ಇಟ್ಟಿರುವ ಪ್ರೀತಿ ಮತ್ತು ನಂಬಿಕೆ ಕಾರಣ. ವೈದ್ಯರು ಮತ್ತು ಸ್ವರ್ಣ ವ್ಯಾಪಾರಿಗಳಲ್ಲಿ ನಂಬಿಕೆ ಬಹಳ ಮುಖ್ಯ ಎಂದ ಅವರು, ಉದಯವಾಣಿ ಮತ್ತು ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ನಡುವಿನ ಬಾಂಧವ್ಯ, ಸಹಯೋಗ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.

ಅವಿಸ್ಮರಣೀಯ ಸಾಧನೆ
ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ ಮಾಲಕರಾದ ರವೀಂದ್ರ ಶೇಟ್‌ ಮಾತನಾಡಿ, ಸುವರ್ಣೋತ್ತರ ಸಂಭ್ರಮದಲ್ಲಿರುವ ಜನಮನದ ಜೀವನಾಡಿ “ಉದಯವಾಣಿ’ ಪತ್ರಿಕೆ ಸರ್ವ ವಿಭಾಗದಲ್ಲಿಯೂ ಯಶಸ್ವಿ ಕಾರ್ಯಗಳ ಮೂಲಕ ಮನೆಮಾತಾಗಿದೆ. ಟಿ. ಸತೀಶ್‌ ಪೈ ಹಾಗೂ ಸಂಧ್ಯಾ ಎಸ್‌. ಪೈ ಅವರ ಕಾರ್ಯಶೈಲಿ ಹಾಗೂ ಪತ್ರಿಕೆಯನ್ನು ಕಟ್ಟಿ ಬೆಳೆಸಿದ ಸ್ವರೂಪ ಮಾದರಿಯಾಗಿದೆ. ಉದಯವಾಣಿ, ತುಷಾರ, ರೂಪತಾರಾ, ತರಂಗ, ತುಂತುರು ಮುಖೇನ ಕೋಟ್ಯಂತರ ಓದುಗರ ಮನತಣಿಸಿದ ಇಬ್ಬರು ಶ್ರೇಷ್ಠ ಸಾಧಕರ ಕಾರ್ಯ ಅವಿಸ್ಮರಣೀಯ. ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ, ಕೌಶಲ್ಯಾತ್ಮಕ ಹೀಗೆ ರಚನಾತ್ಮಕವಾಗಿ ಪ್ರತೀ ಪತ್ರಿಕೆಗೂ ಹೊಸ ಆಯಾಮ ಕೊಡುವಲ್ಲಿ ಸಂಧ್ಯಾ ಪೈ ಅವರ ಕಾರ್ಯ ಅದ್ವಿತೀಯ ಎಂದರು.

Advertisement

ಸಮ್ಮಾನ
ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನ 75ನೇ ವರ್ಷದ ಸಂಭ್ರಮದ ಸವಿನೆನಪಿನಲ್ಲಿ ಮಾಲಕರಾದ ರವೀಂದ್ರ ಶೇಟ್‌ ಮತ್ತು ಪಾಲುದಾರರು ಮಣಿಪಾಲ ಮೀಡಿಯ ನೆಟ್‌ವರ್ಕ್‌ನ ಎಕ್ಸಿಕ್ಯೂಟಿವ್‌ ಚೇರ್‌ವೆುನ್‌ ಟಿ. ಸತೀಶ್‌ ಪೈ ಹಾಗೂ ಡಾ| ಸಂಧ್ಯಾ ಎಸ್‌. ಪೈ ಅವರನ್ನು ಸಮ್ಮಾನಿಸಿದರು. ನವರಾತ್ರಿ ಸಂದರ್ಭ ಉದಯವಾಣಿ ಆಯೋಜಿಸಿದ “ನವರೂಪ’ ಕಾರ್ಯಕ್ರಮಕ್ಕೆ ಉದ್ಯಮ ಕ್ಷೇತ್ರದ “ರಾಯಭಾರಿ’ ಆಗಿದ್ದ ದೀಪ್ತಿ ಶರತ್‌ ಶೇಟ್‌ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಉದಯವಾಣಿ ಮ್ಯಾಗಜಿನ್‌ ವಿಭಾಗ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಪ್ರಸ್ತಾವನೆಗೈದು, 25 ವರ್ಷಗಳಿಂದ ದೀಪಾವಳಿ ವಿಶೇಷಾಂಕವನ್ನು ಹೊರ ತರಲಾಗುತ್ತಿದ್ದು, ಈ ಬಾರಿ 1.5 ಲಕ್ಷ ರೂ. ಗಿಂತಲೂ ಹೆಚ್ಚಿನ ಮೊತ್ತದ ಬಹುಮಾನವನ್ನು ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ನವರು ನೀಡಿದ್ದಾರೆ. ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿರುವುದು ವಿಶೇಷ ಎಂದರು.

ಮಣಿಪಾಲ ಮೀಡಿಯ ನೆಟ್‌ವರ್ಕ್‌ನ ಎಕ್ಸಿಕ್ಯೂಟಿವ್‌ ಚೇರ್‌ವೆುನ್‌ ಟಿ. ಸತೀಶ್‌ ಪೈ, ಎಸ್‌.ಎಲ್‌ ಶೇಟ್‌ ಡೈಮಂಡ್‌ ಹೌಸ್‌ ಪಾಲುದಾರರಾದ ಶರತ್‌ ಶೇಟ್‌, ಪ್ರಸಾದ್‌ ಶೇಟ್‌, ಶನಾಯಾ ಶೇಟ್‌ ಉಪಸ್ಥಿತರಿದ್ದರು.

ಉದಯವಾಣಿಯ ಮಂಗಳೂರು ರೀಜನಲ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ಬಹುಮಾನ ವಿಜೇತರ ವಿವರ ವಾಚಿಸಿದರು. ಮುಖ್ಯ ವರದಿಗಾರ ವೇಣು ವಿನೋದ್‌ ಕೆ.ಎಸ್‌. ಸ್ವಾಗತಿಸಿ, ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಪಾಲುದಾರರಾದ ದೀಪ್ತಿ ಶೇಟ್‌ ವಂದಿಸಿದರು. ಹಿರಿಯ ವರದಿಗಾರ ದಿನೇಶ್‌ ಇರಾ ಕಾರ್ಯಕ್ರಮ ನಿರೂಪಿಸಿದರು.

ದೀಪಾವಳಿ ಧಮಾಕಾ ವಿಜೇತರು
ಬಂಪರ್‌ ಬಹುಮಾನ:
ರೋಹಿತ್‌ ಬಿ. ನಾಯಕ್‌, ಬಿ.ಎಚ್‌. ರಸ್ತೆ, ಶಿವಮೊಗ್ಗ
ಪ್ರಥಮ: ರಕ್ಷಿತ್‌ ದಿನೇಶ್‌ ಕೋಟ್ಯಾನ್‌ ಬಡಗಬೆಟ್ಟು ಉಡುಪಿ,
ಕಾಶಿಶ್‌ ಚಿಲಿಂಬಿ ಮಂಗಳೂರು

ದ್ವಿತೀಯ: ನಿತ್ಯಾನಂದ ಬಲಾ°ಡು ಅಡೂxರು ಮಂಗಳೂರು, ವಿವೇಕ್‌ ಹೆಗ್ಡೆ ಸಾಲಿಗ್ರಾಮ ಉಡುಪಿ, ಆರ್‌.ವಿ. ಕುಲಕರ್ಣಿ ಆಂಜನೇಯ ನಗರ ಬೆಳಗಾವಿ
ತೃತೀಯ: ರಶ್ಮಿ ನಾಯಕ್‌ ಗುಡ್ಡೆ ಅಂಗಡಿ ಬೈಂದೂರು, ಪ್ರಮೋದ್‌ ಕೊಟ್ಟಾರಿ ಪದವು ಮಂಗಳೂರು.
ಎಚ್‌. ಎಸ್‌. ಸೂರಜ್‌ ಕುಮಾರ್‌ ವಿಶ್ವೇಶ್ವರ ಬಡಾವಣೆ ಟಿ.ದಾಸರಹಳ್ಳಿ ಬೆಂಗಳೂರು, ಸ್ವಾತಿ ಕೊಡಂಗಳ ಮರ್ಣೆ.

ಪ್ರೋತ್ಸಾಹಕ ಬಹುಮಾನ: ದಿನೇಶ್‌ ಮೋಹನ್‌ ವಿಜಯನಗರ ಶಿರಸಿ, ಗಣೇಶ್‌ ಉಡುಪ ಕೆ. ಉಪ್ಪಳ ಕಾಸರಗೋಡು, ಕವಿತಾ ಕೆ. ಕೊಲ್ಯ ಮಂಗಳೂರು, ಆನಂದ್‌ ರಾವ್‌ ಮೈಸೂರು, ಅರುಣಾ ಡಿ. ರೈ, ತಲಪಾಡಿ, ವಾಸುದೇವ ಎಸ್‌. ಪೈ ಮಲಾಡ್‌ ವೆಸ್ಟ್‌ ಮುಂಬಯಿ, ಕೃಷ್ಣಪ್ಪ ಪೂಜಾರಿ ಪೆರ್ಣೆ ಬಂಟ್ವಾಳ, ಶಿವಾನಂದ ಹುಕ್ರಟ್ಟೆ ಕಾರ್ಕಳ, ಸುಮನಾ ವಿ. ಕಾಮತ್‌ ಚೇರ್ಕಾಡಿ, ಲತಾ ಆರ್‌. ಮಾರುತಿ ನಗರ, ಬೆಂಗಳೂರು, ದಿನೇಶ್‌ ಶೆಟ್ಟಿ ಇಡ್ಯಾ ಸುರತ್ಕಲ್‌, ಶಂಕರ ದೇವಾಡಿಗ ಎಲ್ಲೂರು, ಕಾಪು, ಗೀತಾ ಹಲ್ಸನಾಡು ವಡೇರಹೋಬಳಿ, ಕುಂದಾಪುರ, ಶೋಭಿತಾ ಕೆ. ಈಶ್ವರ ನಗರ ಮಣಿಪಾಲ, ಗುರುಪ್ರಸಾದ್‌ ಸಿ.ಪಿ. ನಾಲ್ಕೂರು ಸುಳ್ಯ, ತರುಣಾಕ್ಷಿ ಎನ್‌. ಬಿ. ನಿಟ್ಟೂರು, ಹಾಸನ, ಗುರುರಾಜ ಎಚ್‌. ದೇಸಾಯಿ, ಹೇಮಂತ ನಗರ ಹುಬ್ಬಳ್ಳಿ, ಶೇಖರ್‌ ಎಸ್‌. ಕೋಟತಟ್ಟು ಕೋಟ, ಅಂತೊನಿ ಪಿರೇರ ವೇಣೂರು ಬೆಳ್ತಂಗಡಿ, ರಾಜಶೇಖರ್‌ ಎಂ. ಮುದ್ರಾಡಿ ಹೆಬ್ರಿ.

ಮೂಲತಃ ಕೊಕ್ಕರ್ಣೆಯವರು, ಶಿವಮೊಗ್ಗದಲ್ಲಿ ನೆಲೆಸಿದ್ದೇವೆ. ಉದಯವಾಣಿ ಓದುವುದನ್ನು ಬಿಟ್ಟಿಲ್ಲ. ದೀಪಾವಳಿ, ಯುಗಾದಿ ವಿಶೇಷಾಂಕಗಳನ್ನು ಪ್ರತೀ ವರ್ಷ ಓದಿ, ಪ್ರಶ್ನೆಗಳಿಗೆ ಉತ್ತರ ಕಳುಹಿಸಿಸುತ್ತಿದ್ದೇವೆ. ಸಂಧ್ಯಾ ಪೈ ಅವರನ್ನು ಭೇಟಿ ಮಾಡುವ, ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ಗೆ ಭೇಟಿ ನೀಡುವ ಉದ್ದೇಶವಿತ್ತು. ಬಹುಮಾನ ಪಡೆಯುವ ಮೂಲಕ ಅವೆರಡೂ ಸಾಕಾರವಾಗಿದೆ.
– ರೋಹಿತ್‌ ಬಿ.ನಾಯಕ್‌, ಶಿವಮೊಗ್ಗ, ಬಂಪರ್‌ ಬಹುಮಾನ ವಿಜೇತರು

ನಾವು ಉದಯವಾಣಿ ಪತ್ರಿಕೆಯ ಅಭಿಮಾನಿಗಳು. 3 ವರ್ಷದಿಂದ ದೀಪಾವಳಿ ವಿಶೇಷಾಂಕ ಓದುತ್ತಿದ್ದೆವು. ಮದುವೆಯಾಗಿ 50ನೇ ವರ್ಷಕ್ಕೆ ಉದಯವಾಣಿ ಮತ್ತು ಎಸ್‌.ಎಲ್‌. ಶೇಟ್‌ನಿಂದ ಒಳ್ಳೆಯ ಬಹುಮಾನ ಸಿಕ್ಕಿದೆ.
– ಉಮಾ ಕುಲಕರ್ಣಿ, ಬೆಳಗಾವಿ ದ್ವಿತೀಯ ಬಹುಮಾನ ವಿಜೇತರ ಪತ್ನಿ

ದೀಪಾವಳಿ ವಿಶೇಷಾಂಕವನ್ನು ಪ್ರತೀ ವರ್ಷ ಖರೀದಿಸಿ ಓದುತ್ತಿದ್ದೆ. ಇದೇ ಮೊದಲ ಬಾರಿಗೆ ಪ್ರಶ್ನೆಗಳಿಗೆ ಉತ್ತರ ಬರೆದು ಕಳುಹಿಸಿದ್ದೇನೆ. ಬಹುಮಾನ ಬಂದಿರುವುದು ಖುಷಿ ತಂದಿದೆ.
– ಕವಿತಾ ಬಾಲಕೃಷ್ಣ ಕೊಲ್ಯ, ಪ್ರೋತ್ಸಾಹಕ ಬಹುಮಾನ ವಿಜೇತರು

Advertisement

Udayavani is now on Telegram. Click here to join our channel and stay updated with the latest news.

Next