Advertisement

“ಉದಯವಾಣಿ’ಯಿಂದ ಇಂದು ಮಹಿಳಾ ದಿನಾಚರಣೆ

01:00 AM Mar 08, 2019 | Team Udayavani |

ಉಡುಪಿ: ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಕರಾವಳಿಯ ಜನಮನದ ಜೀವನಾಡಿ “ಉದಯವಾಣಿ’ ದಿನಪತ್ರಿಕೆಯು ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಜಿಲ್ಲೆಯ ಹಿರಿಯ ನಾಲ್ವರು ಮಹಿಳಾ ಅಧಿಕಾರಿಗಳೊಂದಿಗೆ ಆಚರಿಸುತ್ತಿದೆ.

Advertisement

ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯತ್‌ ಸಿಇಒ ಸಿಂಧೂ ಬಿ. ರೂಪೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಮಾ. 8ರಂದು ಮಣಿಪಾಲದ “ಉದಯವಾಣಿ’ ಪ್ರಧಾನ ಕಚೇರಿಗೆ ಆಗಮಿಸಿ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. 

ಸಂಪಾದಕೀಯ ಬಳಗದೊಂದಿಗೆ ಸಂವಾದ ನಡೆಸುವ ಈ ಹಿರಿಯ ಅಧಿಕಾರಿಗಳು ಮಹಿಳಾ ಸಶಕ್ತೀಕರಣ, ಮಹಿಳಾಭಿವೃದ್ಧಿ ಉತ್ತೇಜನ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ- ಸವಾಲುಗಳು, ಆರ್ಥಿಕ- ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಇತ್ಯಾದಿ ಸಂಗತಿಗಳ ಕುರಿತು ಬೆಳಕು ಚೆಲ್ಲುವರು. ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್‌ ಕುಮಾರ್‌ ಅವರು ಭಾಗವಹಿಸುವರು.

ಮಹಿಳಾ ಸಶಕ್ತೀಕರಣಕ್ಕೆ ಉಡುಪಿಯೇ ಸಾಕ್ಷಿ
ಈ ಬಾರಿಯ ಮಹಿಳಾ ದಿನಾಚರಣೆ ವಿಶೇಷವೆಂದರೆ ಜಿಲ್ಲೆಯ ನಾಲ್ಕು ಪ್ರಮುಖ ಹುದ್ದೆಗಳ ಸಾರಥ್ಯವನ್ನು ವಹಿಸಿ ಜಿಲ್ಲೆಯನ್ನು ಮುನ್ನಡೆಸುತ್ತಿರುವವರು ಮಹಿಳೆಯರೇ. ಇವರೆಲ್ಲರಿಗೂ ಕಟ್ಟುನಿಟ್ಟಿನ ಅಧಿಕಾರಿಗಳೆಂಬ ಹೆಗ್ಗಳಿಕೆಯೂ ಇದೆ. ಇದಕ್ಕೆ ಪೂರಕವಾಗಿ ಉಸ್ತುವಾರಿ ಸಚಿವೆ ಜಯಮಾಲಾ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರೂ ಇದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಮುನ್ನೋಟ ಹೊಂದಿರುವ ಈ ಅಧಿಕಾರಿಗಳಿಂದ ಸಾರ್ವಜನಿಕರೂ ಬಹಳ ನಿರೀಕ್ಷೆಯಲ್ಲಿದ್ದಾರೆ.

ಈ ದಿಸೆಯಲ್ಲೇ ಮಹಿಳಾ ದಿನಾಚರಣೆಯ ಸಂವಾದ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next