Advertisement
ನಗರದ ನ್ಯಾಷನಲ್ ಕಾಲೇಜ್ ಬಳಿ ಇರುವ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ 40 ಬೆಡ್ ಗಳ ಕೋವಿಡ್ ಎಮರ್ಜೆನ್ಸಿ ಆಕ್ಸಿಜನ್ ಸೆಂಟರ್ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ. ಶಾಸಕ ಉದಯ ಗರುಡಾಚಾರ್ ಹಾಗೂ ವಾಸವಿ ಸಂಸ್ಥೆಯ ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಿ ಆಕ್ಸಿಜನ್ ಅಳವಡಿಕೆ ಬೆಡ್ ಗಳ ಪರಿಶೀಲನೆ ನಡೆಸಿದರು.
Related Articles
Advertisement
ಮೂಲತಃ ತೇಜಸ್ವಿ ಸೂರ್ಯ ಅವರನ್ನು ಚಿಕ್ಕಂದಿನಿಂದ ನೋಡುತ್ತಿದ್ದೇನೆ. ತಮಗೆ ಸಂವಿಧಾನದ ಬಗ್ಗೆ ಅಪಾರ ಗೌರವವಿದೆ. ಎಲ್ಲಾ ಜಾತಿ, ಸಮುದಾಯದವರು ನಮಗೆ ಒಂದೇ ಎಂದು ಹಲವಾರು ಬಾರಿ ತಮ್ಮ ಬಳಿಯೂ ತೇಜಸ್ವಿ ಹೇಳಿದ್ದಾರೆ. ನಮ್ಮ ಶಾಸಕರು ಸಹ ಇದೇ ರೀತಿ ಮಾತನಾಡಿದ್ದಾರೆ ಎಂದು ಹೇಳಿದರು.
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಮುಸ್ಲೀಂ ಮತದಾರರಿದ್ದಾರೆ. 32 ಮಸೀದಿಗಳಿವೆ. ಮಸೀದಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಹಿಂದೂ, ಮುಸ್ಲೀಂ, ಕ್ರೈಸ್ತರ ಜತೆ ನಾವು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಯಾವುದೇ ಕೋಮಿನವರು ಮತ್ತೊಂದು ಕೋಮಿನ ಮೇಲೆ ಮಾತನಾಡಬಾರದು. ಭಾರತ ಜಾತ್ಯತೀತ ರಾಷ್ಟ್ರ. ನಮ್ಮ ಧರ್ಮ, ಸಂಪ್ರದಾಯವನ್ನು ಮನೆಯ ಹೊಸಲಿನ ಒಳಗಡೆ ಇಟ್ಟುಕೊಳ್ಳಬೇಕು. ಹೊಸಲು ದಾಟಿದ ನಂತರ ನಾವು ವಿಶ್ವ ಮಾನವರು. ಇಲ್ಲಿರುವ ಎಲ್ಲರಿಗೂ ಈ ದೇಶದಲ್ಲಿ ಸಮಾನ ಹಕ್ಕಿದೆ ಎಂದರು.
ರಂಜಾನ್ ಸಮಯದಲ್ಲಿ ಮುಸ್ಲೀಂ ಸಮುದಾಯ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತದೆ. ಇವರಲ್ಲಿಯೂ ಸಾಕಷ್ಟು ಕೌಶಲ್ಯವಿದೆ. ಪ್ರತಿಯೊಂದು ಸಮುದಾಯವೂ ಸಹ ವಿಶೇಷವಾಗಿದೆ. ಅದೇ ರೀತಿಯಲ್ಲಿ ಹಿಂದುಗಳಲ್ಲಿ ಸಹ ಸಾಕಷ್ಟು ಕೌಶಲ್ಯವಿದೆ ಎಂದು ಶಾಸಕ ಉದಯ್ ಗರುಡಾಚಾರ್ ಸಮರ್ಥಿಸಿಕೊಂಡರು.
ಸೋಮವಾರದಿಂದ ಇಲ್ಲಿ 40 ಹಾಸಿಗೆಗಳ ಟ್ರಾನ್ಸಿಟ್ ಕೇರ್ ಕೇಂದ್ರ ಪ್ರಾರಂಭವಾಗಲಿದೆ. ನಮ್ಮ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಮ್ಮುವುದು, ಆಮ್ಲಜನಕ ಪ್ರಮಾಣ ಕಡಿಮೆಯಾದಾಗ ಇಲ್ಲಿಗೆ ಕರೆತಂದು ಆರೈಕೆ ಮಾಡುತ್ತೇವೆ. ಪರಿಸ್ಥಿತಿ ಗಂಭೀರವಾದರೆ ಐಸಿಯುಗಳಿಗೆ ದಾಖಲಿಸುತ್ತೇವೆ ಎಂದರು.
ಇದು ಸಂಪೂರ್ಣವಾಗಿ ವೈಶ್ಯ ಸಮುದಾಯದ ದಾನಿಗಳಿಂದ ಮಾಡಿರುವ ವ್ಯವಸ್ಥೆ ಇದಾಗಿದೆ. ಇದರ ಜತೆಗೆ ನಾಲ್ಕು ತೀವ್ರ ನಿಗಾ ಘಟಕ ಐಸಿಯು ಹಾಸಿಗೆಗಳನ್ನು ಸ್ಥಾಪಿಸುವಂತೆ ಸಹ ಕೋರಲಾಗಿದೆ. ಇಲ್ಲಿ 30 ಸುಸಜ್ಜಿತ ವೈದ್ಯರ ತಂಡ ಸಹ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.
ಓದಿ : ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !