Advertisement
ಜತೆಗೆ, ಘಟನೆಯನ್ನು ಕಾಂಗ್ರೆಸ್, ಇತರೆ ಪಕ್ಷಗಳು ಉಗ್ರವಾಗಿ ಖಂಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ರಾಜಸ್ಥಾನದಲ್ಲಿ ಕಾನೂನು, ಸುವ್ಯವಸ್ಥೆ ಕುಸಿದಿದೆ. ಅಲ್ಲದೆ, ಎಲ್ಲ ರಂಗಗಳಲ್ಲಿ ವಿಫಲವಾಗಿರುವ ರಾಜಸ್ಥಾನದ ಕಾಂಗ್ರೆಸ್ ಸರ್ಕಾ ರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
Related Articles
Advertisement
ಬುದ್ಧಿಜೀವಿಗಳು ಎನಿಸಿಕೊಂಡ ಬಹಳ ಜನ ಧಾರವಾಡದ ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಒಡೆದು ಹಾಕಿದಾಗ ಮಾತನಾಡಿದರು. ಈಗ ಉದಯಪುರ ಹತ್ಯೆ ವಿಚಾರದಲ್ಲಿ ಅವರ ನಾಲಿಗೆಗೆ ಲಕ್ವ ಹೊಡೆದಿದೆಯೇ? ಈಗಲೂ ಮಾತನಾಡಬೇಕು ಅಲ್ಲವೇ? ಯಾವೊಂದು ವರ್ಗದ ವಿಚಾರ ಬಂದಾಗ ಖಂಡಿಸುವುದು, ಮತ್ತೂಂದು ವರ್ಗದ ವಿಚಾರದಲ್ಲಿ ಮೌನಕ್ಕೆ ಶರಣಾಗುವುದು. ಇದು ಎಷ್ಟು ಸರಿ? ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇಸ್ಲಾಂ ಭಯೋತ್ವಾದನೆಯ ಭಾಗ: ಸಚಿವ ವಿ. ಸುನಿಲ್‌ಕುಮಾರ್ ಮಾತನಾಡಿ, ಉದಯಪುರದಲ್ಲಿ ನಡೆದ ಘಟನೆ ಅತ್ಯಂತ ಹೇಯ ಕೃತ್ಯ. ಒಂದು ಪೋಸ್ಟರ್ ಹೇಳಿಕೆ ಇಂತಹ ಘಟನೆಗೆ ಕಾರಣವಾಗಿದೆ. ಇಸ್ಲಾಮಿನ ಭಯೋತ್ಪಾದನೆ ಮುಂದುವರಿದ ಭಾಗ ಇದಾಗಿದೆ. ಇಸ್ಲಾಂ ಬಗ್ಗೆಯ ಹೇಳಿಕೆ ಕುತ್ತಿಗೆ ಕಡಿಯೋ ಮಟ್ಟಿಗೆ ಆಗಿದೆ ಎಂದರೆ ಇದರ ಹಿಂದೆ ಒಬ್ಬರಲ್ಲ, ಅನೇಕರು ಇದ್ದಾರೆ ಎಂದು ಹೇಳಿದರು. ಇಡೀ ಸಮುದಾಯ ಇಸ್ಲಾಂ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಲಘುವಾಗಿ ಖಂಡಿಸುವ ಕೆಲಸ ಕಾಂಗ್ರೆಸ್ ಮತ್ತು ಇತರೆ ಪಕ್ಷ ಮಾಡಿದೆ. ಸಿದ್ದರಾಮಯ್ಯ ಟ್ವೀಟ್ ಮಾಡಿ ಎದೆ ನಡುಗಿತು ಎಂದಿದ್ದಾರೆ. ಇದು ಕೇವಲ ಟ್ವೀಟ್‌ನಲ್ಲಿ ಮಾತ್ರವಾ ಅಂತ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.