Advertisement
ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿಗೆ 2 ವರ್ಷಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರಕಾರಕ್ಕೆ ಒತ್ತಡ ತರಲಾಗಿತ್ತು. ಆ ವೇಳೆ ಅನುದಾನ ಬಿಡುಗಡೆಗೊಂಡಿದ್ದರೂ ಅದನ್ನು ಕಾರಣಾಂತರ ದಿಂದ ತಡೆಹಿಡಿಯಲಾಗಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಶಿಫಾರಸ್ಸಿನೊಂದಿಗೆ ಕೆಪಿಸಿಸಿ ಸದಸ್ಯ ಡಾ| ರಘು ಬೆಳ್ಳಿಪ್ಪಾಡಿ, ನೆಲ್ಯಾಡಿ ಕ್ಷೇತ್ರದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ತಾ.ಪಂ.ಸದಸ್ಯೆ ಆಶಾ ಲಕ್ಷ್ಮಣ್ ಅವರ ನೇತೃತ್ವದಲ್ಲಿ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್‌ರವರಿಗೆ ಮನವಿ ಮಾಡಲಾಗಿತ್ತು. ಈ ಮನವಿ ಮೇರೆಗೆ 80 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು , ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹಾಗೆಯೇ ಕೊಯಿಲ ಗ್ರಾಮದ ಗೋಳಿತ್ತಡಿಯಿಂದ-ತ್ರಿವೇಣಿ ಸರ್ಕಲ್ ತನಕ 1.55 ಕಿ.ಮೀ. ರಸ್ತೆ ಅಭಿವೃದ್ಧಿಗೆ 44 ಲಕ್ಷ ರೂ. ಮಂಜೂರಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ ಹಾಗೂ ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಯತೀಶ್ ಬಾನಡ್ಕ ಅವರ ಮುತುವರ್ಜಿಯಿಂದ ಸದ್ರಿ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿದೆ ಎಂದು ಅವರು ಹೇಳಿದ್ದಾರೆ. Advertisement
‘ಉದನೆ-ಶಿಬಾಜೆ ಜಿ.ಪಂ. ರಸ್ತೆಗೆ 80 ಲಕ್ಷ ರೂ.ಅನುದಾನ’
04:57 PM Oct 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.