2023ರ ಮಾರ್ಚ್ ತ್ತೈಮಾಸಿಕದಲ್ಲಿ ಯು ಕೋ ಬ್ಯಾಂಕ್‌ನ ನಿವ್ವಳ ಆದಾಯ ಶೇ.86.2ರಷ್ಟು ಹೆಚ್ಚಳವಾಗುವ ಮೂಲಕ 581.24 ಕೋಟಿ ರೂ.ಗಳಿಗೆ ತಲುಪಿದೆ.
Advertisement
2021-22ನೇ ಸಾಲಿನ ಇದೇ ಜನವರಿ-ಮಾರ್ಚ್‌ನ ತ್ತೈಮಾಸಿಕದಲ್ಲಿ ಬ್ಯಾಂಕ್ 312.18 ಕೊಟಿ ರೂ.ಗಳ ಆದಾಯ ದಾಖಲಿಸಿತ್ತು. ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ವಾರ್ಷಿಕ ನಿವ್ವಳ ಆದಾಯ 929.76 ಕೋಟಿ ರೂ.ಗಳಾಗಿತ್ತು.
2022-23ನೇ ಸಾಲಿನಲ್ಲಿ ವಾರ್ಷಿಕ ನಿವ್ವಳ ಆದಾಯ 1,862.34 ಕೋಟಿ ರೂ. ತಲುಪುವ ಮೂಲಕ ವರ್ಷದಿಂದ ವರ್ಷಕ್ಕೆ ಶೇ.100ರಷ್ಟು ಬೆಳವಣಿಗೆಯಾಗಿದೆ. ಬ್ಯಾಂಕ್ ಈ ವರೆಗೆ ದಾಖಲಿಸಿದ ಅತ್ಯಧಿಕ ವಾರ್ಷಿಕ ನಿವ್ವಳ ಆದಾಯ ಮೌಲ್ಯ ಇದಾಗಿದೆ.