Advertisement
ಹೆದ್ದಾರಿ ದುರಂತಗಳಿಗೆ ಸಾಲು ಸಾಲು ಮಂದಿ ಬಲಿಯಾಗುತ್ತಿದ್ದಾರೆ. ಈ ಅಪಘಾತದ ಕುರಿತು ರಾಷ್ಟ್ರೀಯ ಹೆದ್ದಾರಿ 66ರ ಯೋಜನ ನಿರ್ದೇಶಕ ಹಾಗೂ ಕೆಕೆಆರ್ ಟೋಲ್ ಪ್ರಬಂಧಕರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಹೆದ್ದಾರಿಯಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಿಲ್ಲ. ಬ್ಲಿಂಕರ್ ಆಗಲೀ, ಸಿಗ್ನಲ್ ಲೈಟ್‌ಗಳನ್ನಾಗಲೀ ಹೆದ್ದಾರಿ ಡಾಮರೀಕರಣದ ಬಳಿಕ ಇನ್ನೂ ಅಳವಡಿಸಲಾಗಿಲ್ಲ. ಟೋಲ್ ಅಧಿಕಾರಿಗಳಿಗಲೀ, ಹೆದ್ದಾರಿ ಸುರಕ್ಷೆಯ ಬಗೆಗೆ ಎನ್‌ಎಚ್‌ಎಐ ಅಧಿಕಾರಿಗಳಾಗಲೀ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ 2025ರ ಎರಡು ಹೆದ್ದಾರಿ ಮಾರಣಾಂತಿಕ ಅಪಘಾತಗಳ ಬಳಿಕವೂ ಎಚ್ಚರಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಎರಡು ದಿನಗಳೊಳಗೆ ಸರಿಪಡಿಸದಿದ್ದರೆ ಹೆದ್ದಾರಿ ತಡೆಹೆದ್ದಾರಿ ಅವ್ಯವಸ್ಥೆಗಳ ಬಗ್ಗೆ ಸಕಾಲಿಕ ತುರ್ತು ಕ್ರಮಗಳನ್ನು ಮುಂದಿನ ಎರಡು ದಿನಗಳಲ್ಲಿ ಕೈಗೊಳ್ಳದಿದ್ದಲ್ಲಿ ಜ. 20ರಂದು ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸುವುದಾಗಿ ಘಟನೆಯ ಕುರಿತಾಗಿ ರೊಚ್ಚಿಗೆದ್ದಿರುವ ಉಚ್ಚಿಲದ ಹೆದ್ದಾರಿ ಹೋರಾಟ ಸಮಿತಿ ಮಂಗಳವಾರ ಪಡುಬಿದ್ರಿ ಪೊಲೀಸರ ಸಮಕ್ಷಮ ಹೆದ್ದಾರಿ ಅಧಿಕಾರಿಗಳಿಗೆ ಮನವಿಯೊಂದನ್ನು ಹಸ್ತಾಂತರಿಸಿದ್ದಾರೆ.