Advertisement

ಉಚ್ಚಿಲ: ಹೆದ್ದಾರಿ ಬದಿ ಅಪಾಯಕಾರಿ ಸ್ಥಿತಿಯಲ್ಲಿ ಮೀನು ಮಾರಾಟ

02:45 AM Mar 11, 2022 | Team Udayavani |

ಪಡುಬಿದ್ರಿ: ಬಡಾ ಗ್ರಾಮ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ -66ರ ಬದಿ ಅಪಾಯಕಾರಿ ಸ್ಥಿತಿಯಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಹೆದ್ದಾರಿಯ ಅಪಘಾತ ವಲಯ ದಲ್ಲಿ ಈ ಪ್ರದೇಶವು ಸೇರಿಕೊಂಡಿ ರುವುದರಿಂದ ಇಲ್ಲಿನ ಮೀನು ಮಾರಾಟವು ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ.

Advertisement

ಸರ್ವಿಸ್‌ ರಸ್ತೆ ಕಾಮಗಾರಿಯೂ ಇಲ್ಲಿ ಅರೆಬರೆಯಾಗಿ ನಡೆದಿದೆ. ಇವರ ಪಕ್ಕದಲ್ಲೇ ಉಚ್ಚಿಲ – ಪಣಿಯೂರು – ಶಿರ್ವ ರಸ್ತೆಯೂ ಇದೆ. ಹೆದ್ದಾರಿ ವಾಹನ ಸಂಚಾರವೂ ಇಲ್ಲಿ ಹೆಚ್ಚಿದೆ. ಈ ಸ್ಥಳದಲ್ಲಿ ಮೀನು ಮಾರಾಟ ಮಾಡುತ್ತಿರುವುದು ಬಹಳ ಅಪಾಯಕಾರಿಯಾಗಿದ್ದು ಹಾಗೂ ವಾಹನ ಸವಾರರಿಗೂ ಕಂಟಕಪ್ರಾಯವಾಗಿದೆ.

ಪಂಚಾಯತ್‌ ನಿಂದ ಪರವಾನಿಗೆ ನೀಡಿಲ್ಲ.
ಹೆದ್ದಾರಿ ಕಾಮಗಾರಿಗಳೆಡೆಯಲ್ಲಿ ಪಂಚಾಯತ್‌ ನಿರ್ಮಿಸಿದ್ದ ಮೀನು ಮಾರುಕಟ್ಟೆಯನ್ನು ಕೆಡವಲಾಗಿದೆ. ಅದನ್ನು ಪಂಚಾಯತ್‌ ಪುನರ್‌ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಬರೆದುಕೊಳ್ಳಲಾಗಿತ್ತು. ಈಗ ಎರಡು ದಿನಗಳ ಹಿಂದಷ್ಟೇ ಪ್ರಾಧಿಕಾರವು ಪಂಚಾಯತ್‌ಗೆ ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಮುಂದೆ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಿ ಮೀನುಗಾರಿಕಾ ಇಲಾಖಾ ಅನುದಾನವನ್ನೂ ಪಡೆದುಕೊಂಡು ಮೀನು ಮಾರಾಟಕ್ಕೆ ಸಹಿತವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿಕೊಳ್ಳುವ ಯೋಜನೆ ಪಂಚಾಯತ್‌ ಮುಂದಿದೆ .

ಹೆದ್ದಾರಿ ಬದಿ ಮೀನು ಮಾರಾಟ ಮಾಡುತ್ತಿರುವ ಕುರಿತು ಪಂಚಾಯತ್‌ಗೆ ದೂರುಗಳು ಬರುತ್ತಿವೆ. ಪಂಚಾಯತ್‌ ಇದಕ್ಕೆ ಪರವಾನಿಗೆ ನೀಡಿಲ್ಲ.
– ಕುಶಾಲಿನಿ, ಪಿಡಿಒ, ಬಡಾ ಗ್ರಾ.ಪಂ.

ಶೀಘ್ರ ಕ್ರಮಕ್ಕೆ ಸೂಚನೆ
ತಾ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಪು ತಹಶೀಲ್ದಾರ್‌ ಅವರಲ್ಲಿ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಅಶೋಕ್‌ ಕುಮಾರ್‌, ಪೊಲೀಸ್‌ ಠಾಣಾಧಿಕಾರಿ ಪಡುಬಿದ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next