ಬರ್ನ್: ಷೇರುದಾರರ ಹಿತ ಕಾಪಾಡುವ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕ್ರೆಡಿಟ್ ಸೂಸಿ ಗ್ರೂಪ್ ಎಜಿ ಬ್ಯಾಂಕ್ ಖರೀದಿಸಲು ಸ್ವಿಜರ್ಲೆಂಡ್‌ನ ಯುಬಿಎಸ್ ಗ್ರೂಪ್ ಎಜಿ 1 ಬಿಲಿಯನ್ ಡಾಲರ್ ಆಫರ್ ನೀಡಿದೆ.
ಶುಕ್ರವಾರ ಕ್ರೆಡಿಟ್ ಸೂಸಿ ಗ್ರೂಪ್ ಮಾರುಕಟ್ಟೆ ಮೌಲ್ಯ 8 ಬಿಲಿಯನ್ ಡಾಲರ್ ತಲುಪಿತ್ತು. ಈ ಹಿನ್ನೆಲೆಯಲ್ಲಿ ಯುಬಿಎಸ್ ಗ್ರೂಪ್ ಎಜಿ ನೀಡಿರುವ ಆಫರ್ ತುಂಬ ಕಡಿಮೆಯಾಗಿದ್ದು, ಇದರಿಂದ ಷೇರುದಾರರು ಮತ್ತು ಉದ್ಯೋಗಿಗಳಿಗೆ ನಷ್ಟವಾಗಲಿದೆ ಎಂದು ಕ್ರೆಡಿಟ್ ಸೂಸಿ ಗ್ರೂಪ್ ಎಜಿ ಬ್ಯಾಂಕ್ ಹೇಳಿದೆ.
ಒಂದು ಷೇರ್‌ಗೆ 0.25 ಫ್ರಾಂಕ್ಸ್‌ನಂತೆ ಖರೀದಿಗೆ ಯುಬಿಎಸ್ ಗ್ರೂಪ್ ಎಜಿ ಆಫರ್ ನೀಡಿದೆ. ಹೀಗಾಗಿ ಒಟ್ಟು ಕ್ರೆಡಿಟ್ ಸೂಸಿ ಗ್ರೂಪ್ ಎಜಿ ಬ್ಯಾಂಕ್ ಷೇರುಗಳ ಖರೀದಿ 0.92 ಬಿಲಿಯನ್ ಫ್ರಾಂಕ್ಸ್ ಅಂದರೆ 1 ಬಿಲಿಯನ್ ಅಮೆರಿಕನ್ ಡಾಲರ್ ಆಗಲಿದೆ.