Advertisement

ಉಬರ್‌ನ ಸಾವಿರಾರು ಉದ್ಯೋಗಿಗಳು ಮನೆಗೆ

06:48 PM May 16, 2020 | sudhir |

ಸ್ಯಾನ್‌ ಫ್ರಾನ್ಸಿಸ್ಕೊ: ಕೋವಿಡ್‌-19 ಸೋಂಕಿನಿಂದಾಗಿ ಉಬರ್‌ ಕಂಪೆನಿ ನಷ್ಟಕ್ಕೆ ಸಿಲುಕಿದೆ. ನಿರ್ವಹಣಾ ವೆಚ್ಚ ಕಡಿತಗೊಳಿಸುವ ಸಲುವಾಗಿ ಕಂಪೆನಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.

Advertisement

ಮೊದಲ ಹಂತದಲ್ಲಿ ಸುಮಾರು 3,700 ಉದ್ಯೋಗಿಗಳನ್ನು ಜೂಮ್‌ ಕರೆಗಳ ಮೂಲಕ ವಜಾಗೊಳಿಸಿದ್ದು, ಇಂದು ಉಬರ್‌ ಜತೆಗೆ ನಿಮ್ಮ ಕೊನೆಯ ಕೆಲಸದ ದಿನ ಎಂದು ಹೇಳುವ ಮೂಲಕ ಒಮ್ಮೆಲೇ ತೆಗೆದು ಹಾಕಿದೆ.

ವಿಡಿಯೋ ತುಣುಕಿನಲ್ಲಿ ಕಂಪನಿಯ ವ್ಯವಸ್ಥಾಪಕರೊಬ್ಬರು “ಇಂದು ಉಬರ್‌ನೊಂದಿಗಿನ ನಿಮ್ಮ ಕೊನೆಯ ಕೆಲಸದ ದಿನ ಆಗಿರುತ್ತದೆ’ ಎಂಬ ಸಂದೇಶ ನೀಡಿ ಅವರನ್ನು ನೌಕರಿಯಿಂದ ಕಿತ್ತು ಹಾಕಲಾಗಿದೆ. ಲಾಕ್‌ಡೌನ್‌ನಿಂದಾಗಿ ಟ್ಯಾಕ್ಸಿಗಳಿಗೆ ಬಾಡಿಗೆ ಇಲ್ಲದಿರುವ ಕಾರಣ ಅನಿವಾರ್ಯವಾಗಿ ಈ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಉಬರ್‌ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next