Advertisement

ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !

04:53 PM May 06, 2021 | Team Udayavani |

ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕುನ ಅಲೆ ಇಡೀ  ದೇಶವನ್ನು ಆತಂಕಕ್ಕೆ ಒಳಪಡಿಸಿದೆ.  ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾಣ ಆಗುತ್ತಿದೆ. ಕೋವಿಡ್ ಸೋಂಕನ್ನು ಕಟ್ಟಿ ಹಾಕುವ ಕಾರಣದಿಂದ ಲಸಿಕೆ ಸ್ವೀಕರಿಸಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.

Advertisement

ಎಲ್ಲಾ ಉದ್ಯಮ ಕ್ಷೇತ್ರಗಳು ತನ್ನ ಉದ್ಯೋಗಿಗಳಿಗೆ ಲಸಿಕೆಯನ್ನು ಹಾಕಿಸಿಕೊಳ್ಲುವಂತೆ ಕೇಳಿಕೊಳ್ಳುತ್ತಿದ್ದು ಮತ್ತು ಎಷ್ಡೋ ಖಾಸಗಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿವೆ, ಮಾತ್ರವಲ್ಲದೇ, ಕೆಲವೊಂದು ಕಂಪೆನಿಗಳು ಲಸಿಕೆಯ ವೆಚ್ಚವನ್ನೂ ಕೂಡ ಭರಿಸುತ್ತಿವೆ.  ಅಂತಹ  ಕಂಪೆನಿಗಳ ಸಾಲಿಗೆ ಈಗ ಉಬರ್ ಸಂಸ್ಥೆ ಕೂಡ ಸೇರ್ಪಡೆಯಾಗಿದೆ.

ಓದಿ : ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಸಾಧ್ಯತೆ ?

ಮುಂದಿನ ಆರು ತಿಂಗಳಲ್ಲಿ ತನ್ನ ಒಂದೂವರೆ ಲಕ್ಷ ಚಾಲಕರು ಕೋವಿಡ್-19 ಲಸಿಕೆ ಪಡೆಯಲು 18.5 ಕೋಟಿ ಪ್ರೋತ್ಸಾಹಕ  ಧನವನ್ನು ನೀಡುವುದಾಗಿ ಉಬರ್ ಕಂಪನಿ  ತಿಳಿಸಿದೆ.

ಎರಡು ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಕಾರು, ಆಟೋ ಮತ್ತು ಮೋಟೋ ಚಾಲಕರು ಮಾನ್ಯಗೊಂಡ ಡಿಜಿಟಲ್ ಲಸಿಕಾ ಸ್ವೀಕಾರ ಪ್ರಮಾಣಪತ್ರಗಳನ್ನು ತೋರಿಸಿದರೆ 400 ರೂ. ಪಡೆಯಲು ಅರ್ಹರಾಗಿರುತ್ತಾರೆ ಎಂದು ತನ್ನ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

Advertisement

ಈ ಬಗ್ಗೆ  ಪ್ರತಿಕ್ರಿಯಿಸಿದ ಉಬರ್ ಇಂಡಿಯಾ ದಕ್ಷಿಣ ಏಷ್ಯಾ ಡ್ರೈವರ್ ಆಫರೇಷನ್ ಮತ್ತು ಸಪ್ಲೈ ಮುಖ್ಯಸ್ಥ ಪವನ್ ವೈಶ್, ನಮ್ಮ ಎಲ್ಲಾ ಉತ್ಪನ್ನಗಳ ಮಾರ್ಗಗಳಲ್ಲಿನ ಚಾಲಕರಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಮತ್ತು ಲಸಿಕೆಯನ್ನು ಪಡೆಯುವಂತೆ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದಾರೆ.

ಓದಿ :  ಬಯೋ ಬಬಲ್ ಒಳಗೆ ಕೋವಿಡ್ ಹೇಗೆ ಬಂತೆನ್ನುವುದೇ ಆಶ್ಚರ್ಯ: ಸೌರವ್ ಗಂಗೂಲಿ

Advertisement

Udayavani is now on Telegram. Click here to join our channel and stay updated with the latest news.

Next