Advertisement

ಏಕನಾಮ ಇರುವವರಿಗೆ ಯುಎಇ ಪ್ರವೇಶ ನಿಷೇಧ! ಸರ್‌ನೇಮ್‌ ಇದ್ದರಷ್ಟೇ ಅವಕಾಶ

12:19 AM Nov 24, 2022 | Team Udayavani |

ಹೊಸದಿಲ್ಲಿ: ನಿಮ್ಮ ಹೆಸರಿನ ಜತೆಗೆ ಯಾವುದೇ ಉಪನಾಮ (ಸರ್‌ನೇಮ್‌)ಗಳಿಲ್ಲವೇ? ನೀವು ಏಕನಾಮ(ಸಿಂಗಲ್‌ ನೇಮ್‌)ವನ್ನು ಮಾತ್ರ ಹೊಂದಿದ್ದೀರಾ? ಹಾಗಿದ್ದರೆ ನಿಮಗೆ ಯುಎಇ (ಸಂಯುಕ್ತ ಅರಬ್‌ ಒಕ್ಕೂಟ)ಗೆ ಭೇಟಿ ನೀಡಲು ಸಾಧ್ಯವಾಗದು!

Advertisement

ಹೌದು ಯಾವುದೇ ಸರ್‌ನೇಮ್‌ ಇಲ್ಲದ “ಹೆಸರು’ ಮಾತ್ರ ಹೊಂದಿ­ರುವ ವ್ಯಕ್ತಿಗಳಿಗೆ ನಮ್ಮ ದೇಶಕ್ಕೆ ಪ್ರವೇಶವಿಲ್ಲ ಎಂಬ ಹೊಸ ನಿಯವ­ುವನ್ನು ಯುಎಇ ಜಾರಿಗೆ ತಂದಿದೆ.

ನ.21ರಿಂದಲೇ ಅನ್ವಯ­ವಾಗುವಂತೆ ಪ್ರವೇಶ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಏರ್‌ಇಂಡಿಯಾ, ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಸುತ್ತೋಲೆ­ಯನ್ನೂ ಹೊರಡಿಸಿವೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗುತ್ತದೆ. ನೀವು ಏಕನಾಮ ಹೊಂದಿರುವವರಾದರೆ ಉದಾಹರಣೆಗೆ ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಹೆಸರು “ನವೀನ್‌’ ಎಂದಷ್ಟೇ ಇದ್ದರೆ, ನಿಮಗೆ ಪ್ರವೇಶ ಸಿಗುವುದಿಲ್ಲ. ನಿಮ್ಮ ಹೆಸರಿನ ಜೊತೆಗೆ ಉಪನಾಮಗಳಿದ್ದರೆ (ಉದಾ : ನವೀನ್‌ ರಾಮಪ್ಪ, ಬೆಂಗಳೂರು) ನೀವು ಯಾವುದೇ ಸಮಸ್ಯೆಯಿಲ್ಲದೇ ಯುಎಇಗೆ ಎಂಟ್ರಿ ಪಡೆಯಬಹುದು.

ಈ ನಿಯಮವು ವಿಸಿಟಿಂಗ್‌ ವೀಸಾ, ವೀಸಾ ಆನ್‌ ಅರೈವಲ್‌, ಉದ್ಯೋಗ ವೀಸಾ ಮತ್ತು ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಅನ್ವಯವಾಗುತ್ತದೆ. ಯುಎಇ ರೆಸಿಡೆಂಟ್‌ ಕಾರ್ಡ್‌ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next