ಹೊಸದಿಲ್ಲಿ: ಮಕ್ಕಳು ಮತ್ತು ಗರ್ಭಿಣಿಯರ ಲಸಿಕೆ ಕಾರ್ಡ್ ಸುರಕ್ಷಿತವಾಗಿರಿ ಸುವುದು, ದಿನಾಂಕ ನೆನಪಿಟ್ಟುಕೊಳ್ಳುವುದು ಮತ್ತಿತರ ರಗಳೆಗಳಿಗೆ ಪರಿಹಾರವಾಗಿ ಕೇಂದ್ರ ಸರಕಾರವು ಸದ್ಯವೇ ಎಲ್ಲ ರೂಢಿಗತ ಲಸಿಕೆ ವಿತರಣೆಯನ್ನು ಡಿಜಿಟಲೀಕರಣಗೊಳಿಸುವತ್ತ ಮುಂದಡಿ ಇರಿಸಿದೆ.
Advertisement
ಕೋವಿಡ್ ಸಂದರ್ಭ ಆರಂಭಿಸಲಾದ ಕೊವಿನ್ ಡಿಜಿಟಲ್ ವೇದಿಕೆಯನ್ನು ದೇಶದ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ (ಯುಐಪಿ)ಕ್ಕೆ ಯು-ವಿನ್ ಎಂಬ ಹೆಸರಿನಲ್ಲಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಇದನ್ನು ಈಗಾಗಲೇ ಪರೀಕ್ಷಾರ್ಥ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತಲಾ ಎರಡು ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.