Advertisement

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಮೆರಿಕದ ಖ್ಯಾತ ಗಾಯಕಿ ಮಿಲ್‌ಬೆನ್‌ ಭಾಗಿ

05:29 PM Aug 06, 2022 | Shwetha M |

ವಾಷಿಂಗ್ಟನ್:‌ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR) ಆಹ್ವಾನದ ಮೇರೆಗೆ ಆಮೆರಿಕದ ಖ್ಯಾತ ಗಾಯಕಿ, ಮೇರಿ ಮಿಲ್‌ಬೆನ್‌ ಅವರು ಭಾರತಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.

Advertisement

ಮೇರಿ ಮಿಲ್‌ಬೆನ್‌ ಅವರು, ‘ಓಂ ಜೈ ಜಗದೀಶ್ ಹರೇ’ ಮತ್ತು ‘ಜನ ಗಣ ಮನ’ ಗೀತೆಗಳನ್ನು ಹಾಡಿ ಹೆಸರುವಾಸಿಯಾಗಿದ್ದಾರೆ. ಅವರು ದೇಶದ 75 ನೇ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಪ್ರದರ್ಶನ ನೀಡಲು ಭಾರತಕ್ಕೆ ಆಗಮಿಲಿಸಲಿದ್ದಾರೆ.

1959ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಸ್ಮರಣಾರ್ಥ 75 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಮಿಲ್‌ಬೆನ್‌, ನಾನು ಅಮೆರಿಕದ ಸಾಂಸ್ಕೃತಿಕ ರಾಯಭಾರಿಯಾಗಿ ಭಾಗವಹಿಸುತ್ತಿರುವುದು ಹೆಮ್ಮಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಐಸಿಸಿಆರ್‌ನಿಂದ ಭಾರತಕ್ಕೆ ಆಹ್ವಾನಿಸಲ್ಪಟ್ಟ ಮೊದಲ ಅಮೆರಿಕನ್ ಕಲಾವಿದೆಯಾಗಿದ್ದಾರೆ. ಅವರು ಅಮೆರಿಕವನ್ನು ಪ್ರತಿನಿಧಿಸುವ ಅಧಿಕೃತ ಅತಿಥಿಯಾಗಿದ್ದಾರೆ ಎಂದು ಐಸಿಸಿಆರ್‌ ತಿಳಿಸಿದೆ.

Advertisement

ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: ಐತಿಹಾಸಿಕ ಬೆಳ್ಳಿ ಗೆದ್ದ ಪ್ರಿಯಾಂಕಾ ಗೋಸ್ವಾಮಿ- ಅವಿನಾಶ್ ಸಬ್ಲೆ

“ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ ಅತ್ಯಂತ ಖುಷಿಯಾಗಿದ್ದೇನೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಪ್ರಮುಖ ಪ್ರಜಾಸತ್ತಾತ್ಮಕ ಮೈತ್ರಿಯನ್ನು ಎತ್ತಿ ಹಿಡಿಯುವುದಾಗಿ ತಿಳಿಸಿದ್ದಾರೆ.

“ಇತರ ದೇಶಗಳಿಗೆ, ನಾನು ಪ್ರವಾಸಿಯಾಗಿ ಹೋಗಬಹುದು, ಆದರೆ ಭಾರತಕ್ಕೆ, ನಾನು ಯಾತ್ರಿಕನಾಗಿ ಬರುತ್ತೇನೆ-ಎಂಬ ಮಾರ್ಟಿನ್ ಲೂಥರ್‌ ಮಾತುಗಳು ನೆನಪಾಗುತ್ತಿವೆ” ಎಂದು ಮಿಲ್‌ಬೆನ್‌ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next