Advertisement
ಲಕ್ನೋದಲ್ಲಿ ಗುರುವಾರ ಮಾತನಾಡಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. 2007ರಿಂದ 2012ರ ಅವಧಿಯಲ್ಲಿ 364 ಗಲಭೆಗಳು ಉಂಟಾಗಿತ್ತು. ಎಸ್‌ಪಿ ಅವಧಿಯಲ್ಲಿ 2012- 2017ರ ಅವಧಿಯಲ್ಲಿ 700 ದೊಡ್ಡ ಪ್ರಮಾ ಣದ ಗಲಭೆಗಳು ನಡೆದಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
Related Articles
Advertisement
ಕಾಂಗ್ರೆಸ್ ಅಭ್ಯರ್ಥಿಗಳಿಂದ ಇಂದು ಪ್ರಮಾಣ :
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬೀಚ್ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳು “ಕಾಂಗ್ರೆಸ್‌ಗೆà ನಿಷ್ಠೆ ಹೊಂದಿರುತ್ತೇವೆ’ ಎಂದು ಪ್ರಮಾಣ ಸ್ವೀಕರಿಸಲಿದ್ದಾರೆ. ಅವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ಪರ್ಧಿಸಲಿರುವ ಸಂಖಲಿಮ್ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಫೆ. 14ರಂದು ಗೋವಾದಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.
ನಾಡಿದ್ದು ಸಿಎಂ ಅಭ್ಯರ್ಥಿ ಘೋಷಣೆ :
ಪಂಜಾಬ್‌ನಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ರವಿವಾರ ಹೊರಬೀಳಲಿದೆ. ಪಕ್ಷದ ನಾಯಕ ರಾಹುಲ್ ಗಾಂಧಿಯೇ ಸಿಎಂ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದ್ದಾರೆ. ಅದಕ್ಕೂ ಮೊದಲು ರಾಜ್ಯದಲ್ಲಿ ಜನಾಭಿಪ್ರಾಯ ಸಮೀಕ್ಷೆಯನ್ನು ನಡೆಸಲಾಗಿದೆ. ಜನರಿಗೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎನ್ನುವುದು ಫೋನ್, ಎಸ್‌ಎಂಎಸ್ ಮೂಲಕ ತಿಳಿಸಿ ಎಂದು ಕೋರಲಾಗಿದೆ. ಅದರಲ್ಲಿ ಚರಣ್‌ಜಿತ್ ಚನ್ನಿ, ನವಜೋತ್ ಸಿಧು ಆಯ್ಕೆಯಿದ್ದು, ಹೆಚ್ಚು ಪಾಲು ಜನರು ಚನ್ನಿಯನ್ನೇ ಆಯ್ಕೆ ಮಾಡಿದ್ದಾರೆ.
ಮಹಿಳೆಯರಿಗಿಲ್ಲ ಸಮಾನತೆ: ಪಂಜಾಬ್‌ನ 2.77 ಕೋಟಿ ಮತದಾರರಲ್ಲಿ 1.46 ಕೋಟಿ ಪುರುಷರಿದ್ದರೆ, 1.31 ಕೋಟಿ ಮಹಿಳೆಯರಿದ್ದಾರೆ. ಜನಸಂಖ್ಯೆಯಲ್ಲಿ ಮಹಿಳೆಯರು ಬಹುತೇಕ ಸಮಾನರಾಗಿದ್ದಾರಾದರೂ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾತ್ರ ಸಮಾನತೆಯಿಲ್ಲ. 117 ಸ್ಥಾನವಿರುವ ರಾಜ್ಯದಲ್ಲಿ ಎಎಪಿ 12 ಸ್ಥಾನಕ್ಕೆ ಮಹಿಳಾ ಅಭ್ಯರ್ಥಿ ಘೋಷಿಸಿದ್ದರೆ, ಕಾಂಗ್ರೆಸ್ 11, ಬಿಜೆಪಿ ಮೈತ್ರಿ 8 ಮತ್ತು ಶಿರೋಮಣಿ ಅಕಾಲಿದಳ ಮೈತ್ರಿ 5 ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಗಳನ್ನು ಘೋಷಿಸಿದೆ. ಎಎಪಿ ಶೇ. 10.25, ಕಾಂಗ್ರೆಸ್ ಶೇ. 9.40, ಬಿಜೆಪಿ ಮೈತ್ರಿ ಶೇ.6.83 ಮತ್ತು ಎಸ್‌ಎಡಿ ಮೈತ್ರಿ ಶೇ.4.27 ಸ್ಥಾನದಲ್ಲಿ ಮಹಿಳೆಯರಿಗೆ ಸ್ಥಾನ ಕೊಟ್ಟಿದೆ.
ಇಂದು ಪ್ರಧಾನಿ ಪ್ರಚಾರ :
ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದಲ್ಲಿ ಪ್ರಚಾರ ನಡೆಸಲಿದ್ದಾರೆ. ವರ್ಚುವಲ್ ಮೂಲಕ ಅವರು ಅಲ್ಮೋರಾ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿಯವರ ಪ್ರಚಾರ ಭಾಷಣವನ್ನು ನಾಲ್ಕು ಸ್ಥಳಗಳಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಸ್ಥಳದಲ್ಲಿ ಕೂಡ 1 ಸಾವಿರ ಮಂದಿಗೆ ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ದೇವೇಂದ್ರ ಭಾಸಿನ್ ಹೇಳಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಇತರ ಮುಖಂಡರು ಭಾಗವಹಿಸಲಿದ್ದಾರೆ.