Advertisement

ಪುನೇರಿ-ಮುಂಬಾ 33-33 ಟೈ

10:24 AM Sep 06, 2019 | Sriram |

ಬೆಂಗಳೂರು: ಪ್ರೊ ಕಬಡ್ಡಿ ಬೆಂಗಳೂರು ಚರಣದ ಗುರುವಾರದ ಪುನೇರಿ ಪಲ್ಟಾನ್‌-ಯು ಮುಂಬಾ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತು.

Advertisement

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಜಿದ್ದಾಜಿದ್ದಿ ಪಂದ್ಯದಲ್ಲಿ ಎರಡೂ ತಂಡಗಳು ಪ್ರಬಲ ಹೋರಾಟ ನಡೆಸಿದವು. ಯು ಮುಂಬಾ ತಾರಾ ರೈಡರ್‌ ಅಭಿಷೇಕ್‌ ಸಿಂಗ್‌ (11 ಅಂಕ) ಶ್ರೇಷ್ಠ ನಿರ್ವಹಣೆ ನೀಡಿದರು. ಒಟ್ಟಾರೆ 22 ರೈಡ್‌ ಮಾಡಿದ ಅಭಿಷೇಕ್‌ ಸಿಂಗ್‌ 9 ಟಚ್‌ ಪಾಯಿಂಟ್‌ನಿಂದ ಗಮನ ಸೆಳೆದರು. ಜತೆಗೆ 2 ಬೋನಸ್‌ ಅಂಕವನ್ನೂ ತಂದಿತ್ತರು. ಎಂ.ಎಸ್‌. ಅತುಲ್‌ (4 ಅಂಕ), ಡಿಫೆಂಡರ್‌ ಸಂದೀಪ್‌ ನರ್ವಾಲ್‌ (4ಅಂಕ) ಕೂಡ ಗಮನ ಸೆಳೆದರು. ಡಿಫೆಂಡರ್‌ ಫ‌ಜಲ್‌ ಅಟ್ರಾಚಲಿ
(3ಅಂಕ), ಅರ್ಜುನ್‌ ದೆಸ್ವಾಲ್‌ (3ಅಂಕ), ಸುರಿಂದರ್‌ಸಿಂಗ್‌ (2ಅಂಕ) ಆಟ ಸಾಮಾನ್ಯ ಮಟ್ಟದಲ್ಲಿತ್ತು.

ಮಂಜಿತ್‌ ನೆರವು
ಪುನೇರಿ ಪಲ್ಟಾನ್‌ ತಂಡದ ಪರ ಮಂಜಿತ್‌ (10 ಅಂಕ) ಆಲ್‌ರೌಂಡ್‌ ಆಟದ ಮೂಲಕ ರಂಜಿಸಿದರು. ಬದಲಿ ಆಟಗಾರನಾಗಿ ಕಣಕ್ಕಿಳಿದ ಪಂಕಜ್‌ ಮೋಹಿತೆ (5 ಅಂಕ) ಮಿಂಚಿದ್ದು ವಿಶೇಷವಾಗಿತ್ತು. ಆದರೆ ರೈಡರ್‌ ನಿತಿನ್‌ ತೋಮರ್‌, ಸುರ್ಜಿತ್‌ ಸಿಂಗ್‌ ಕ್ಲಿಕ್‌ ಆಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next