Advertisement

ಕವಚಗೆ ಯು/ಎ

11:24 AM Nov 28, 2018 | |

ಶಿವರಾಜಕುಮಾರ್‌ ಅಭಿನಯದ “ಕವಚ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ರಾಮ್‌ಗೊಪಾಲ್‌ ವರ್ಮಾ ಅವರ ಜೊತೆ ಕೆಲಸ ಮಾಡಿ ಅನುಭವವಿರುವ ಜಿವಿಆರ್‌. ವಾಸು ಈ ಚಿತ್ರದ ನಿರ್ದೇಶಕರು.

Advertisement

ಕನ್ನಡದಲ್ಲಿ ಹೊಸಥರದ ಕಥೆಯನ್ನು ಮೆಚ್ಚುವ ಪ್ರೇಕ್ಷಕರು ಇರುವುದರಿಂದ, ಅವರಿಗೆ ಕವಚ ಚಿತ್ರ ಖಂಡಿತಾ ಇಷ್ಟವಾಗಲಿದೆ ಎಂಬ  ವಿಶ್ವಾಸ ಚಿತ್ರತಂಡಕ್ಕಿದೆ. ಶಿವರಾಜಕುಮಾರ್‌ ಅವರೊಂದಿಗೆ, ಇಶಾ ಕೊಪ್ಪಿಕರ್‌, ರವಿಕಾಳೆ, ರಾಜೇಶ್‌ ನಟರಂಗ, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ಜಯಪ್ರಕಾಶ್‌ ಮೊದಲಾದ ಕಲಾವಿದರ ತಾರಾಗಣವಿದೆ. ಹೆಚ್‌.ಎಂ.ಎ ಸಿನಿಮಾ ಬ್ಯಾನರ್‌ ನಲ್ಲಿ ಎಂ.ವಿ.ವಿ ಸತ್ಯ ನಾರಾಯಣ್‌ “ಕವಚ’ ಚಿತ್ರವನ್ನು  ನಿರ್ಮಿಸಿದ್ದಾರೆ. 

ಚಿತ್ರಕ್ಕೆ ರಾಹುಲ್‌ ಶ್ರೀವಾತ್ಸವ್‌ ಕ್ಯಾಮರಾ, ಜೊ.ನಿ ಹರ್ಷ ಸಂಕಲನ, ಅರ್ಜುನ್‌ ಜನ್ಯ ಸಂಗೀತ ಚಿತ್ರಕ್ಕಿದೆ. ಕೆ. ಕಲ್ಯಾಣ್‌, ಡಾ. ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌ ಚಿತ್ರದ ಹಾಡುಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ರವಿವರ್ಮ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next