Advertisement

ಶಂಖನಾದ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

10:45 AM Jan 31, 2018 | |

ಈ ಹಿಂದೆ “ಶಂಖನಾದ’ ಎಂಬ ಚಿತ್ರ ಬಂದಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರ ನೋಡಿದವರು, ಆ ಪಾತ್ರಧಾರಿ ಅರವಿಂದ್‌ ಅವರನ್ನು ಮರೆಯೋದಿಲ್ಲ. ಆ ಚಿತ್ರದ ಬಳಿಕ ಅವರನ್ನು ಎಲ್ಲರೂ “ಶಂಖನಾದ’ ಅರವಿಂದ್‌ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಈಗ ಯಾಕೆ ಶಂಖನಾದ ಅರವಿಂದ್‌ ಬಗ್ಗೆ ಪೀಠಿಕೆ ಅಂತೀರಾ. ಈಗ ಹೊಸಬರು ಸೇರಿಕೊಂಡು ಅದೇ ಹೆಸರಿನ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ.

Advertisement

ಶ್ರೀ ಸಿದ್ಧರಾಮೇಶ್ವರ ಫಿಲ್ಮ್ಸ್ ಬ್ಯಾನರ್‌ನಲ್ಲಿ ವಿಜಯರೆಡ್ಡಿ ಎಸ್‌.ಚೌದರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಬಿಡುಗಡೆಗೆ ಅಣಿಯಾಗಿರುವ ಈ ಚಿತ್ರವನ್ನು ವಿಶ್ವನಾಥ ಬಸಪ್ಪ ಕಾಳಗಿ ನಿರ್ದೇಶನ ಮಾಡಿದ್ದಾರೆ. ವಿನು ಮನಸು ಅವರು ಸಂಗೀತ ನೀಡಿದ್ದಾರೆ. ಸತೀಶ್‌ ಚಂದ್ರಯ್ಯ ಅವರು ಸಂಕಲನ ಮಾಡಿದ್ದಾರೆ.

ನಕಲ ಟಿ.ದಾಂಡೇಕರ್‌ ಅವರು ಕ್ಯಾಮೆರಾ ಹಿಡಿದಿದ್ದಾರೆ. ಮಂಜುನಾಥ್‌, ಜಗದೀಶ ಗೌಡ, ಹೈಟ್‌ ಮಂಜು ಅವರ ನೃತ್ಯವಿದೆ. ಚಿತ್ರದಲ್ಲಿ ಶಾಂತರೆಡ್ಡಿ ಪಾಟೀಲ್‌, ನಯನಾ, ಶ್ರೀನಿವಾಸ, ಶ್ರೀರಶ್ಮಿತಾ, ಅಶೋಕ್‌ ಕಂಬಳಿ, ಸಿದ್ಧಾರ್ಥ ಕೆ, ರಾಜಾರಾಂ, ಶಂಕರ್‌ ಮುಂತಾದವರು ನಟಿಸಿದ್ದಾರೆ.ಅಂದಹಾಗೆ, “ಶಂಖನಾದ’ ಒಂದು ಥ್ರಿಲ್ಲರ್‌ ಮತ್ತು ಸಸ್ಪೆನ್ಸ್‌ ಕಥೆವುಳ್ಳ ಚಿತ್ರ. ಬಾಗಲಕೋಟೆ, ಗದಗ ಮತ್ತು ಚಿಕ್ಕಮಗಳೂರಿನ ಸುತ್ತಮುತ್ತಲ್ಲಿ ಚಿತ್ರೀಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next