Advertisement

ಅ-19 ಮಹಿಳಾ ಟಿ20 ವಿಶ್ವಕಪ್‌: ಇಂದು ಭಾರತ-ನ್ಯೂಜಿಲೆಂಡ್‌ ಉಪಾಂತ್ಯ

11:55 PM Jan 26, 2023 | Team Udayavani |

ಬೆನೋನಿ: 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟ ಅಂತಿಮ ಹಂತ ತಲುಪಿದೆ. ಇಷ್ಟರವರೆಗೆ 36 ಪಂದ್ಯಗಳು ನಡೆದಿವೆ. ಪ್ರಶಸ್ತಿಗಾಗಿ ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ ಕಣದಲ್ಲಿ ಉಳಿದಿವೆ. ಈ ನಾಲ್ಕು ತಂಡಗಳ ನಡುವೆ ಶುಕ್ರವಾರ ಸೆಮಿಫೈನಲ್‌ ಹೋರಾಟ ನಡೆಯಲಿದೆ. ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್‌ ಸವಾಲನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್‌ ಪಂದ್ಯವು ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ ನಡುವೆ ನಡೆಯಲಿದೆ.

Advertisement

“ಡಿ’ ಬಣದಲ್ಲಿದ್ದ ಭಾರತ ಲೀಗ್‌ ಹಂತದಲ್ಲಿ ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್‌ ತಂಡವನ್ನು ಸೋಲಿಸಿತ್ತು. ಸೂಪರ್‌ ಸಿಕ್ಸ್‌ ಹಂತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದೆದುರು ಕೇವಲ 87 ರನ್ನಿಗೆ ಸರ್ವಪತನ ಕಂಡು ಸೋಲನ್ನು ಕಂಡಿತ್ತು. ಆಬಳಿಕ ಶ್ರೀಲಂಕಾ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್‌ ತಲುಪುವುದನ್ನು ಖಚಿತಗೊಳಿಸಿತ್ತು. ಉಪನಾಯಕಿ ಶ್ವೇತಾ ಸೆಹ್ರಾವತ್‌, ಎಡಗೈ ಸ್ಪಿನ್ನರ್‌ ಮನ್ನತ್‌ ಕಶ್ಯಪ್‌, ಶಫಾಲಿ ವರ್ಮ ತಂಡದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ಸೆಮಿಫೈನಲ್‌ನಲ್ಲಿ ಭಾರತದ ಎದುರಾಳಿ ನ್ಯೂಜಿಲೆಂಡ್‌ ಕೂಡ ಲೀಗ್‌ ಹಂತದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಸೂಪರ್‌ ಸಿಕ್ಸ್‌ನಲ್ಲಿ ರುವಾಂಡ ವಿರುದ್ಧ ಕಷ್ಟದಲ್ಲಿ ಗೆದ್ದ ನ್ಯೂಜಿಲೆಂಡ್‌ ಆಬಳಿಕ ಪಾಕಿಸ್ತಾನವನ್ನು ಸೋಲಿಸಿ ಮುನ್ನಡೆದಿತ್ತು. ಜಾರ್ಜಿಯಾ ಪ್ಲಿಮ್ಮರ್‌ ಮತ್ತು ಅನ್ನಾ ಬ್ರೌನಿಂಗ್‌ ತಂಡದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ಸೂಪರ್‌ ಸಿಕ್ಸ್‌ ಹಂತದಲ್ಲಿ ಭಾರತವನ್ನು ಭರ್ಜರಿಯಾಗಿ ಸೋಲಿಸಿದ್ದ ಆಸ್ಟ್ರೇಲಿಯ ವನಿತೆಯರು ಕೂಟದ ಆರಂಭಿಕ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತು ಆಘಾತಕ್ಕೆ ಒಳಗಾಗಿತ್ತು. ಆದರೆ ಆಬಳಿಕ ಉತ್ತಮ ಆಟದ ಪ್ರದರ್ಶನ ನೀಡಿ ಮುನ್ನಡೆದಿತ್ತು. ಉಳಿದೆಲ್ಲ ತಂಡಗಳನ್ನು ಗಮನಿಸಿದರೆ ಇಂಗ್ಲೆಂಡ್‌ ತಂಡವು ಉತ್ತಮ ರನ್‌ಧಾರಣೆಯೊಂದಿಗೆ ಸೆಮಿಫೈನಲಿಗೇರಿದ ತಂಡ ಎಂದೆನಿಸಿಕೊಂಡಿದೆ. ಲೀಗ್‌ ಹಂತದಲ್ಲಿ ಜಿಂಬಾಬ್ವೆಯನ್ನು 25 ಮತ್ತು ರುವಾಂಡವನ್ನು ಕೇವಲ 45 ರನ್ನಿಗೆ ನಿಯಂತ್ರಿಸಿದ್ದ ಇಂಗ್ಲೆಂಡ್‌ ಆಬಳಿಕ ಸೂಪರ್‌ ಸಿಕ್ಸ್‌ನಲ್ಲಿ ಐರ್ಲೆಂಡ್‌ ಮತ್ತು ವೆಸ್ಟ್‌ಇಂಡೀಸ್‌ ತಂಡವನ್ನು ಸೋಲಿಸಿದ ಸಾಧನೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next