ಬಂಟ್ವಾಳ: ಲಾರಿ ಢಿಕ್ಕಿ ಹೊಡೆದು ದ್ವಿಚಕ್ರ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಿದ್ದಕಟ್ಟೆ ಸಮೀಪದ ಸೋರ್ನಾಡು ಎಂಬಲ್ಲಿ ಇಂದು (ಮಂಗಳವಾರ ಜೂ.14 ) ಸಂಜೆ ವೇಳೆ ನಡೆದಿದೆ.
ಲೊರೆಟ್ಟೋ ಕಮಲ್ ಕಟ್ಟೆ ನಿವಾಸಿ ನಿತಿನ್ ಹಾಗೂ ಶಶಿರಾಜ್ ಮೃತ ದುರ್ಧೈವಿಗಳೆಂದು ತಿಳಿದು ಬಂದಿದೆ. ಶಶಿರಾಜ್ ಪಿಕಪ್ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದರು.
ಸಿದ್ದಕಟ್ಟೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ಬಿಸಿರೋಡಿನಿಂದ ಕಾರ್ಕಳಕ್ಕೆ ಅತೀ ವೇಗದಿಂದ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿ ನೇರವಾಗಿ ಬೈಕ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದ್ದು, ಬೈಕಿನಲ್ಲಿದ್ದ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಢಿಕ್ಕಿ ಹೊಡೆದು ಪರಾರಿ : ಅಜಾಗರೂಕತೆಯಿಂದ ಹಾಗೂ ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿ ಚಾಲಕನೇ ಅಪಘಾತಕ್ಕೆ ಕಾರಣವಾಗಿದ್ದು, ಇಬ್ಬರ ಸಾವಿಗೆ ಈತನೇ ನೇರ ಹೊಣೆಯಾಗಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಪಘಾತ ನಡೆಸಿ ಲಾರಿ ಚಾಲಕ ಲಾರಿ ನಿಲ್ಲಿಸದೆ ಓಡಿ ಹೋಗಲು ಪ್ರಯತ್ನ ಮಾಡಿದ್ದಾನೆ. ಆದರೆ ಸ್ಥಳೀಯರು ಬೆನ್ನಿಟ್ಟಿ ಸಿದ್ದಕಟ್ಟೆ ಸಮೀಪದ ಕುದ್ಕೋಳಿ ಎಂಬಲ್ಲಿ ಟಿಪ್ಪರ್ ಲಾರಿಗೆ ಅಡ್ಡ ಇಟ್ಟು ಲಾರಿ ನಿಲ್ಲಿಸಿ ಅತನ ವಿರುದ್ಧ ಹರಿಹಾಯಿದ್ದಿದ್ದಾರೆ.
Related Articles
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.