Advertisement

ದಾವಣಗೆರೆ: ರೀಲ್ಸ್‌ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು

03:06 PM Oct 01, 2022 | Team Udayavani |

ದಾವಣಗೆರೆ: ರೀಲ್ಸ್‌ ಮಾಡಲು ಹೋಗಿ ಯುವಕರಿಬ್ಬರು ನೀರುಪಾಲಾದ ಘಟನೆ ದಾವಣಗೆರೆ ಜಿಲ್ಲೆ ಹರಗನಹಳ್ಳಿ  ಚೆಕ್ ಡ್ಯಾಂ ಬಳಿ  ಶನಿವಾರ (ಅ.1 ರಂದು) ನಡೆದಿದೆ.

Advertisement

ಹರಿಹರ ಆಶ್ರಯ ಬಡಾವಣೆಯ ಪವನ್ (25), ಪ್ರಕಾಶ್ (24) ನೀರುಪಾಲಾದ ಸ್ನೇಹಿತರು.

ಘಟನೆಯ ವಿವರ: ಹರಿಹರ ಸಮೀಪದ ಹರಗನಹಳ್ಳಿ ಚೆಕ್ ಡ್ಯಾಂ ನಲ್ಲಿ ರೀಲ್ಸ್‌ ಮಾಡಲು ಹೋಗಿದ್ದ ಪ್ರಕಾಶ್‌ ನೀರಿನಲ್ಲಿ ಮುಳುಗಿದ್ದಾನೆ. ಮುಳಗುತ್ತಿದ್ದ ಸ್ನೇಹಿತನನ್ನು ಪವನ್ ರಕ್ಷಿಸಲು ಹೋಗಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಪವನ್‌ ಕೂಡ ಮುಳುಗಿದ್ದಾನೆ.

ಈ ಪೈಕಿ ಹರಿಹರದ ರಾಘವೇಂದ್ರ ಮಠದ ಬಳಿ  ಓರ್ವನ ಮೃತ ದೇಹ ಪತ್ತೆಯಾಗಿದೆ.

ನೀರಿನಲ್ಲಿ ಮುಳುತ್ತಿದ್ದನ್ನು ನೋಡಿದ ಮತ್ತೊಬ್ಬ ಸ್ನೇಹಿತ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾನೆ.  ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next