Advertisement

ಗಾಲ್ವಾನ್‌ ಸಂಘರ್ಷಕ್ಕೆ 2 ವರ್ಷ ಪೂರ್ಣ

11:27 PM May 05, 2022 | Team Udayavani |

ಲಡಾಖ್‌: ಚೀನದ ಪೀಪಲ್ಸ್‌ ಲಿಬರೇ ಷನ್‌ ಆರ್ಮಿ(ಪಿಎಲ್‌ಎ) ಗಾಲ್ವಾನ್‌ ಕಣಿವೆಯಲ್ಲಿ ಅತಿಕ್ರಮಣ ಮಾಡಿ, ಎರಡೂ ದೇಶಗಳ ನಡುವೆ ಹೊಸ ಸಂಘರ್ಷವನ್ನು ಹುಟ್ಟುಹಾಕಿ ಗುರುವಾರಕ್ಕೆ 2 ವರ್ಷ ಪೂರ್ಣಗೊಂಡಿದೆ.

Advertisement

2020ರ ಮೇ 5ರಂದು 1,597 ಕಿ.ಮೀ. ಉದ್ದದ ಎಲ್‌ಎಸಿಯಲ್ಲಿ  ಭಾರತ ಮತ್ತು ಚೀನ ನಡುವೆ ಆರಂಭ ವಾದ ಈ ಸಂಘರ್ಷದ ಬೆಂಕಿ ಇನ್ನೂ ಆರಿಲ್ಲ. ಆಗ ಎರಡು ದೇಶಗಳ ಸೈನಿಕರು ಪರಸ್ಪರ ಮುಷ್ಟಿ ಯುದ್ಧ ನಡೆಸಿದ್ದರು. ಸುಮಾರು 15 ಸುತ್ತುಗಳ ಮಾತುಕತೆ ನಡೆದರೂ, ಕೋಂಗಾR ಲಾ ಪ್ರದೇಶದಲ್ಲಿ ಸೇನೆ ವಾಪಸಾತಿ ಪ್ರಕ್ರಿಯೆ ಅರ್ಧಂಬರ್ಧ ನಡೆದಿದ್ದರೆ, ಡೆಪ್ಸಾಂಗ್‌ ಮತ್ತು ಡೆಮ್‌ಚೋಕ್‌ ವಲಯಗಳಲ್ಲಿ ಈಗಲೂ ಎರಡೂ ಸೇನೆಗಳು ಗಸ್ತು ತಿರುಗುತ್ತಿವೆ. 2 ವರ್ಷಗಳ ಹಿಂದೆ ಆರಂಭದಲ್ಲಿ ಗಾಲ್ವಾನ್‌ ಅತಿಕ್ರಮಣ ಯತ್ನ ನಡೆಸಿದ್ದ ಚೀನ, ಅನಂತರದಲ್ಲಿ ಕುಗ್ರಾಂಗ್‌ ನದಿ, ಗೋಗ್ರಾ, ಪ್ಯಾಂಗಾಂಗ್‌ ತ್ಸೋ ಪ್ರದೇಶ ದಲ್ಲೂ ತನ್ನ ಸೇನೆಯನ್ನು ನಿಯೋಜಿಸಿತ್ತು.

ಸತತ ಮಾತುಕತೆ ಮೂಲಕ ಪ್ಯಾಂಗಾಂಗ್‌ ತ್ಸೋ, ಗಾಲ್ವಾನ್‌ ಮತ್ತು ಗೋಗ್ರಾ-ಹಾಟ್‌ ಸ್ಪ್ರಿಂಗ್ಸ್‌ನಲ್ಲಿ ಉಭಯ ಸೇನೆಗಳು ತಮ್ಮ ಯೋಧರನ್ನು ವಾಪಸ್‌ ಪಡೆದರಾದರೂ, ಕೋಂಗ್ಕಾಲಾದಲ್ಲಿ ಈಗಲೂ ಚೀನ ಸೇನೆ ಇದೆ. ಪ್ರಸ್ತುತ ಗಾಲ್ವಾನ್‌ ಕಣಿವೆ ಮತ್ತು ಪ್ಯಾಂಗಾಂಗ್‌ ತ್ಸೋದಲ್ಲಿ ಶಾಂತಿ ನೆಲೆಸಿದೆ. ಆದರೆ, ಚೀನ ಸೇನೆಯು ತನ್ನ ನೆಲದಲ್ಲಿರುವ ಉಪ್ಪು ನೀರಿನ ಸರೋವರಕ್ಕೆ ಹೊಸ ಸೇತುವೆಯನ್ನು ನಿರ್ಮಿಸಿದೆ. ಯೋಧರ ಚಲನವಲನ ಹಾಗೂ ಸರಕು ಸಾಗಣೆಗೆ ಅನುಕೂಲವಾಗಲೆಂದು ಇದನ್ನು ಮಾಡಿದೆ. ಮತ್ತೂಂದೆಡೆ, ಅದಕ್ಕೆ ಎದುರಾಗಿ ಭಾರತವೂ ಗಡಿಯಲ್ಲಿ ತನ್ನ ಸೇನಾಬಲವನ್ನು ಬಲಿಷ್ಠಗೊಳಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next