Advertisement

ಬಾಲಕನನ್ನು ಅಪಹರಿಸಿ 50 ಲಕ್ಷಕ್ಕೆ ಡಿಮ್ಯಾಂಡ್: ಇಬ್ಬರು ಮಹಿಳೆಯರ ಬಂಧನ

12:37 PM Jun 11, 2022 | Team Udayavani |

ಬೆಂಗಳೂರು: 5ನೇ ತರಗತಿ ವಿದ್ಯಾರ್ಥಿ ಯನ್ನು ಅಪಹರಿಸಿ 50 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಿಹಾರ ಮೂಲದ ಮಂಗಿತ ಮತ್ತು ದುರ್ಗ ಬಂಧಿತ ಮಹಿಳೆಯರು. ಈ ಪ್ರಕರಣದ ಮತ್ತೂಬ್ಬ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ವಿದ್ಯಾರ್ಥಿಯ ಪಕ್ಕದ ಮನೆಯ ನಿವಾಸಿ ಮಂಗಿತ ಮನೆ ಕೆಲಸ ಮಾಡಿಕೊಂಡಿದ್ದು, ದುರ್ಗ ಎಂಬ ಮಹಿಳೆಯನ್ನು ಈ ವಿದ್ಯಾರ್ಥಿಗೆ ಪರಿಚಯ ಮಾಡಿಕೊಟ್ಟಿದ್ದು, ಆಗಾಗ ಮಾತನಾಡಿಸುತ್ತಿದ್ದಳು. ದುರ್ಗಗೆ ಬಾಲಕನನ್ನು ಅಪಹರಣ ಮಾಡಿದರೆ 10 ಲಕ್ಷ ರೂ. ಕೊಡಿಸುವುದಾಗಿ ಪುಸಲಾಯಿಸಿ ಅಪಹರಿಸಲು ಮಂಗಿತ ಪ್ರಚೋದನೆ ನೀಡಿದ್ದಳು. ಅದರಂತೆ ಕಳೆದ ಮೇ 7ರಂದು ಸಂಜೆ 5.30ರ ಸುಮಾರಿನಲ್ಲಿ ವಿದ್ಯಾರ್ಥಿ ಮನೆ ಮುಂದೆ ಆಟವಾಡುತ್ತಿದ್ದಾಗ ದುರ್ಗ ಅಪಹರಿಸಿಕೊಂಡು ಆಟೋದಲ್ಲಿ ಜಿಗಣಿಯ ಫಾರಂಹೌಸ್‌ ಬಳಿ ಬಾಲಕನನ್ನು ಇಟ್ಟಿದ್ದಳು.

ನಂತರ ವಿದ್ಯಾರ್ಥಿಯ ತಂದೆಯ ಮೊಬೈಲ್‌ಗೆ ಕರೆ ಮಾಡಿ 50 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕನನ್ನು ರಕ್ಷಿಸಿ ಸೆಕ್ಯೂರಿಟಿ ಗಾರ್ಡ್‌ ಗೌರವ್‌ ಸಿಂಗ್‌ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದರು. ಇದೀಗ ಇಬ್ಬರೂ ಮಹಿಳೆಯರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next