Advertisement
ಏನಿದು ಬಿಎಸ್ 62000ನೇ ಇಸವಿಯಲ್ಲಿ ಬಿಎಸ್ ಮಾಲಿನ್ಯ ನಿಯಮ ಪರಿಚಯಿಸಲಾಯಿತು. 2010ರಲ್ಲಿ ಬಿಎಸ್ 3 ವಾಹನಗಳು ಮಾರುಕಟ್ಟೆಗೆ ಬಂದವು. ಬಿಎಸ್ 4 ಮಾದರಿಯ ವಾಹನಗಳ ಮುಂದಿನ ಅವತರಣಿಕೆಯೇ ಬಿಎಸ್ 6. ಪರಿಸರ ಸ್ನೇಹಿ ಎಂಜಿನ್‌ಗಳನ್ನು ಈ ವಾಹನಗಳು ಹೊಂದಿ ರಲಿವೆ. ಬಿಎಸ್3, ಬಿಎಸ್4 ಬಳಿಕ ಬಿಎಸ್6 ಮುಂದಿನ ವರ್ಷ ಜಾರಿಗೆ ಬರಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಎಸ್6 ದ್ವಿಚಕ್ರ ವಾಹನಗಳು ಮಾತ್ರ ಇವೆ. ಕಾರು, ಅಟೋ ರಿಕ್ಷಾ ಮತ್ತು ಕಮರ್ಶಿಯಲ್ ವಾಹನಗಳು ಮಾರ್ಚ್ ತಿಂಗಳ ಬಳಿಕ ಮಾರುಕಟ್ಟೆಗೆ ಬರಲಿವೆ. ಇನ್ನು ಕೆಲವು ಐಷಾರಾಮಿ ವಿದೇಶಿ ಕಾರುಗಳು ಈಗಾಗಲೇ ಲಭ್ಯ ಇವೆ. ಶೇ. 10-15 ಏರಿಕೆ
ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್6 ಮಾದರಿಯ ದ್ವಿ ಚಕ್ರ ವಾಹನಗಳು ಸಾಮಾನ್ಯ ದರಕ್ಕೆ ಮಾರಾಟವಾಗುತ್ತಿವೆೆ. ಆದರೆ ಈ ತಿಂಗಳಾಂತ್ಯದಲ್ಲಿ ಬರುವ ದೀಪಾವಳಿ ಬಳಿಕ ಅವುಗಳ ದರ ಶೇ. 10ರಿಂದ 15 ಹೆಚ್ಚಾಗಲಿದೆ.
Related Articles
ದೀಪಾವಳಿ ಬಳಿಕ ಕನಿಷ್ಠ 4 ಸಾವಿರ ರೂ.ಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದಾ: 100 ಸಿಸಿ ಸಾಮರ್ಥ್ಯದ ಬೈಕ್‌ನ ಎಕ್ಸ್ ಶೋರೂಂ ದರ 40,000 ರೂ. ಇದ್ದರೆ ಅವುಗಳಿಗೆ ಹೆಚ್ಚುವರಿಯಾಗಿ 4 ಸಾವಿರ ರೂ. ಹೆಚ್ಚಾಗಲಿದೆ. 1 ಲಕ್ಷಗಳ ಬೈಕ್‌ನ ದರ 10 ಸಾವಿರ ದಿಂದ 15 ಸಾವಿರ ರೂ. ಹೆಚ್ಚಾಗುವ ಸಾಧ್ಯತೆ ಇದೆ.
Advertisement
ಬಿಎಸ್ 4 ಗಡುವುಈಗ ಮಾರುಕಟ್ಟೆಯಲ್ಲಿರುವ ಬಿಎಸ್4 ಮಾದರಿಯ ವಾಹನಗಳನ್ನು 2020ರ ಮಾರ್ಚ್ ಒಳಗೆ ಮಾರಾಟ ಮಾಡಬೇಕಾಗಿದೆ. ಎಪ್ರಿಲ್ 1ರ ಬಳಿಕ ಮಾರಾಟಗೊಳ್ಳುವ ಎಲ್ಲ ವಾಹನಗಳು ಬಿಎಸ್6 ಮಾದರಿ ಎಂಜಿನ್ ಹೊಂದಿರಬೇಕು. ಜಿಎಸ್‌ಟಿ ಕಡಿಮೆಯಾದರೆ…
ಈಗಿನ ಆಟೋ ಮಾರುಕಟ್ಟೆಯ ಹಿನ್ನಡೆಗೆ ಜಿಎಸ್‌ಟಿ ಹೆಚ್ಚಿರುವುದು ಒಂದು ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಳಿಕೆ ಯಾದರೆ ಬಿಎಸ್6 ವಾಹನಗಳ ದರದಲ್ಲಿ ಇಳಿಕೆ ಕಾಣಬಹುದು. ಹೋಂಡಾ ಪ್ರಥಮ
ದೇಶದಲ್ಲಿ ಮೊದಲ ಬಿಎಸ್6 ದ್ವಿ ಚಕ್ರ ವಾಹನವನ್ನು ಹೋಂಡಾ ಸಂಸ್ಥೆ ಪರಿಚಯಿಸಿದೆ. ಸೆಪ್ಟಂಬರ್‌ನಲ್ಲಿ ಆ್ಯಕ್ಟಿವಾ 125 ಸ್ಕೂಟರ್ ಮಾರು ಕಟ್ಟೆಗೆ ಬಂದಿದ್ದು ಒಳ್ಳೆಯ ಬೇಡಿಕೆ ಇದೆ. ಇದರ ದರ ಬಿಎಸ್4ರ ಇದೇ ಮಾಡೆಲ್‌ಗೆ ಹೋಲಿಸಿದರೆ ಶೇ. 10-15 ಹೆಚ್ಚು. ಟಿವಿಎಸ್
ಟಿವಿಎಸ್ ಸಂಸ್ಥೆ ಈಗಾಗಲೇ ತನ್ನ 19 ಮಾದರಿಯ ವಾಹನಗಳ ಉತ್ಪ ನ್ನವನ್ನು ಆರಂಭಿಸಿದ್ದು, ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಹೀರೋ
ಹೀರೋ ಈಗಾಗಲೇ ತನ್ನ ಸ್ಪೆಂಡರ್ ಐಸ್ಮಾರ್ಟ್ 110 ಸಿಸಿ ಬೈಕ್ ಅನ್ನು ತಯಾರಿಸಿದ್ದು, ಮುಂದಿನ ತಿಂಗಳು ಅದು ಮಾರುಕಟ್ಟೆಗೆ ಬರಲಿದೆ. ದರ ಹೆಚ್ಚಳ ಏಕೆ?
ಈಗಾಗಲೇ ಆರ್ಥಿಕ ಸಂಕಷ್ಟ ದಿಂದ ಅಟೋಮೊಬೈಲ್ ವಲಯ ತತ್ತರಿಸಿದೆ. ಬಿಎಸ್ 4 ಮಾದರಿಯ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ವ್ಯಾಪಾರಗೊಳ್ಳದೇ ಉಳಿದಿದ್ದು, ಅವನ್ನು ಬಿಎಸ್6 ಮಾದರಿಗೆ ಬದಲಾಯಿಸಬೇಕಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಗ್ರಾಹಕನ ಮೇಲೆ ಸಂಸ್ಥೆಗಳು ಹಾಕಬೇಕಾಗಿದೆ. ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ವಾಹನಗಳನ್ನು ಬದಲಾಯಿಸುವುದು ಕಷ್ಟವಾದ ಕಾರಣ ದರ ದುಬಾರಿಯಾಗಲಿದೆ. ಬಿಎಸ್6ರಲ್ಲಿ ಬಿಎಸ್4 ವಾಹನಕ್ಕೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ಕಡಿಮೆ. ಪೆಟ್ರೋಲ್ ವಾಹನಗಳಲ್ಲಿ ಶೇ. 25 ಮತ್ತು ಡೀಸಿಲ್ ವಾಹನಗಳಲ್ಲಿ ಶೇ. 75 ಮಾಲಿನ್ಯ ಕಡಿಮೆ.