ಬೆಳ್ತಂಗಡಿ: ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಸವಣಾಲು ರಸ್ತೆಯ ಮಸೀದಿ ಬಳಿ ಮಾ. 30ರಂದು ಸಂಭವಿಸಿದೆ.
ಅಳದಂಗಡಿಯ ಕುರ್ದಲಬೆಟ್ಟು ನಿವಾಸಿ ಹೆನ್ರಿ ಡಿ’ಸೋಜಾ(62) ಮೃತರು.
ಮತ್ತೋರ್ವ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಕರಂಬಾರು ನಿವಾಸಿ ಕರುಣಾಕರ ಹೆಗ್ಡೆ (60) ಗಂಭೀರ ಗಾಯಗೊಂಡಿದ್ದು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮೃತ ಹೆನ್ರಿ ಡಿ’ಸೋಜಾ ಅವರು ಅಳದಂಗಡಿ ಹಾ.ಉ.ಸ. ಸಂಘದ ಮಾಜಿ ಕಾರ್ಯದರ್ಶಿಯಾಗಿದ್ದರು.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸಂತೋಷ್ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ¨ªಾರೆ.