Advertisement

ಪ್ರಪೋಸ್ ಮಾಡಿದ ವಿದ್ಯಾರ್ಥಿನಿ : ಕಾಲೇಜಿನಿಂದ ಅಮಾನತು

03:44 PM Mar 14, 2021 | Team Udayavani |

ಲಾಹೋರ್:  ಕ್ಯಾಂಪಸ್ ನಲ್ಲಿ  ಪ್ರಪೋಸ್ ಮಾಡಿ ನಂತರ ತಬ್ಬಿಕೊಂಡ ಯುವಕ ಮತ್ತು ಯುವತಿಯನ್ನು ಲಾಹೋರ್ ವಿಶ್ವ ವಿದ್ಯಾಲಯವು ಅಮಾನತು ಮಾಡಿರುವ ಘಟನೆ ನಡೆದಿದೆ.

Advertisement

ಕ್ಯಾಂಪಸ್ ನಲ್ಲಿ ಯುವಕ ಮತ್ತು ಯುವತಿಯು ಪರಸ್ಪರ ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಇದು ವಿಶ್ವ ವಿದ್ಯಾಲಯದ ನಿಯಮಗಳಿಗೆ ಬಾಹೀರವಾಗಿದ್ದು, ಮತ್ತು ಶಾಂತಿಯನ್ನು ಕದಡುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ಲಾಹೋರ್ ವಿವಿ ತಿಳಿಸಿದೆ.

ಯುವತಿಯು ಯುವಕನಿಗೆ ಪ್ರಪೋಸ್ ಮಾಡಿದ್ದು, ತನ್ನ ಪ್ರಿಯಕರನನ್ನು ತಬ್ಬಿಕೊಂಡಿದ್ದಾಳೆ. ಈ ವೇಳೆ ಅಲ್ಲಿ ನೆರೆದಿದ್ದ ಯೂನಿವರ್ಸಿಟಿ ವಿದ್ಯಾರ್ಥಿಗಳು ಪ್ರೇಮಿಗಳನ್ನು ಹುರಿದುಂಬಿಸಿದ್ದಾರೆ. ಪ್ರೇಮಿಗಳು ತಬ್ಬಿಕೊಂಡಿರುವ ಮತ್ತು ವಿದ್ಯಾರ್ಥಿಗಳು ಜೋರಾಗಿ ಚೀರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಜರುಗಿದ ಮೇಲೆ ಆ ಯುವಕ ಮತ್ತು ಯುವತಿಯನ್ನು ಅಲ್ಲಿನ ಪ್ರಾಂಶುಪಾಲರು ಮಾತುಕತೆಗೆ ಕರೆದಿದ್ದಾರೆ. ಆದರೆ ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ಕಾಲೇಜು ಪ್ರಾಂಶುಪಾಲರ ಬಗ್ಗೆ ನೆಟ್ಟಿಗರು ಗರಂ ಆಗಿದ್ದು, ಬಾಲಿವುಡ್ ಸಿನಿಮಾಗಳ ಪ್ರಾಂಶುಪಾಲರಿಗೆ ಹೋಲಿಕೆ ಮಾಡಿ ವ್ಯಂಗ್ಯ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next