Advertisement
2018-19ನೇ ಸಾಲಿನ ಸಕ್ಕರೆ ಮಾಹೆಯಲ್ಲಿ ಶೇ.10ರಷ್ಟು ಇಳುವರಿ ನೀಡುವ ಪ್ರತಿ ಟನ್ ಕಬ್ಬಿಗೆ 2750 ರೂ. ದರನಿಗದಿಪಡಿಸಿದ್ದರೆ, ಶೇ.9.5 ಹಾಗೂ ಅದಕ್ಕಿಂತ ಕಡಿಮೆ ಇಳುವರಿ ಬರುವ ಪ್ರತಿ ಟನ್ ಕಬ್ಬಿಗೆ 2610 ರೂ. ದರ ನಿಗದಿಪಡಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಕಬ್ಬಿಗೆ ಎರಡೆರಡು ಮಾದರಿಯ ಎಫ್ಆರ್‌ಪಿ ದರ ನಿಗದಿಪಡಿಸುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ದರವನ್ನು ಕಾರ್ಖಾನೆಗಳೇ ನಿಗದಿ ಮಾಡುವುದರಿಂದ ರೈತರಿಗೆ ಮೋಸವಾಗುತ್ತದೆ. ಮತ್ತು ನಿರ್ದಿಷ್ಟ ವಿಧಾನ ಯಾವುದು ಎಂಬ ಗುಟ್ಟನ್ನೂ ಕಾರ್ಖಾನೆಗಳು ಬಿಟ್ಟುಕೊಡದ ಕಾರಣ ರೈತರಿಗೆ ಸತ್ಯ ತಿಳಿಯದು. ಒಂದನೇ ಇಳುವರಿ ಕಬ್ಬಿಗೆ ಎರಡನೇ ಇಳುವರಿ ದರ ನೀಡುವ ಸಾಧ್ಯತೆಯಿದೆ. ಅಲ್ಲದೆ ಈ ಬಗ್ಗೆ ಪ್ರಶ್ನಿಸಲೂ ಆಗುವುದಿಲ್ಲ ಎಂದು ಕಬ್ಬು ಬೆಳೆಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.