Advertisement

ಬೆಂಗಳೂರು ಏರ್‌ಪೋರ್ಟಲ್ಲಿ ತಪ್ಪಿದ ಮಹಾ ದುರಂತ !

10:16 AM Jan 20, 2022 | Team Udayavani |

ನವದೆಹಲಿ: ಬೆಂಗಳೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಎರಡು ವಿಮಾನಗಳು ಆಗಸದಲ್ಲಿ ಡಿಕ್ಕಿ ಹೊಡೆದು ಉಂಟಾಗುವ ದುರಂತ ಸ್ವಲ್ಪದರಲ್ಲಿಯೇ ತಪ್ಪಿದೆ. ಜ.9ರಂದು ಈ ಘಟನೆ ನಡೆದಿದೆ.

Advertisement

ಇದರಿಂದಾಗಿ ಎರಡು ವಿಮಾನಗಳಲ್ಲಿದ್ದ 414 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತನಿಖೆಗೆ ಆದೇಶ ನೀಡಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಜಿಸಿಎ ಮಖ್ಯಸ್ಥ ಅರುಣ್‌ ಕುಮಾರ್‌ “ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಮತ್ತು ಉತ್ತರವೆಂಬ ಎರಡು ರನ್‌ವೇಗಳಿವೆ. ಜ.9 ಬೆಳಗ್ಗೆ ಶಿಫ್ಟ್ ನಲ್ಲಿದ್ದ ಅಧಿಕಾರಿ, ದಕ್ಷಿಣ ರನ್‌ವೇ ಸ್ಥಗಿತಗೊಳಿಸಿ, ಉತ್ತರ ರನ್‌ವೇನಲ್ಲೇ ಕಾರ್ಯಾಚರಣೆ ಮಾಡಲು ನಿರ್ಧರಿಸಿದ್ದಾರೆ. ಆದರೆ ಈ ವಿಚಾರವಾಗಿ ದಕ್ಷಿಣದ ರನ್‌ವೇ ನಿಯಂತ್ರಕರಿಗೆ ಮಾಹಿತಿ ಕೊಟ್ಟಿಲ್ಲ. ಹಾಗಾಗಿ ಎರಡೂ ರನ್‌ವೇನ ನಿಯಂತ್ರಕರು ಒಂದೇ ಸಮಯದಲ್ಲಿ ಎರಡು ವಿಮಾನಗಳ ಹಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನಿಂದ ಕೋಲ್ಕತ ಹೊರಟಿದ್ದ ಇಂಡಿಗೋ 6ಇ455 ವಿಮಾನ ಮತ್ತು ಬೆಂಗಳೂರಿನಿಂದ ಭುವನೇಶ್ವರ ಹೊರಟಿದ್ದ ಇಂಡಿಗೋ 6ಇ246 ವಿಮಾನಗಳು ಒಂದೇ ಬಾರಿಗೆ ಟೇಕಾಫ್ ಆಗಿವೆ.

ಇದನ್ನೂ ಓದಿ:ಆಂಬ್ಯುಲೆನ್ಸ್ ಚಕ್ರಕ್ಕೆ ಹುರುಳಿ ಸೊಪ್ಪು ಸಿಲುಕಿ ಅವಾಂತರ : ಗರ್ಭಿಣಿ ಪರದಾಟ, ಚಾಲಕ ಸುಸ್ತು

ಎರಡೂ ವಿಮಾನ 3000 ಅಡಿ ಮೇಲೇರುತ್ತಿದ್ದಂತೆಯೇ ರೆಡಾರ್‌ ಕಂಟ್ರೋಲರ್‌ ಆಗಿದ್ದ ಲೋಕೇಂದ್ರ ಸಿಂಗ್‌ಗೆ ವಿಚಾರ ಗೊತ್ತಾಗಿದ್ದು, ಅವರು ವಿಮಾನಗಳ ದಾರಿ ಬದಲಿಸಿದ್ದಾರೆ. ಇದರಿಂದಾಗಿ ಅವುಗಳು ಪರಸ್ಪರ ಡಿಕ್ಕಿ ಹೊಡೆಯುವುದು ತಪ್ಪಿದಂತಾಗಿದೆ ಎಂದು ಡಿಜಿಸಿಐ ಪ್ರಾರ್ಥಮಿಕ ವರದಿಯಲ್ಲಿ ತಿಳಿಸಿದೆ.

Advertisement

ಕೋಲ್ಕತ ಹೊರಟಿದ್ದ ವಿಮಾನದಲ್ಲಿ ಆರು ಸಿಬ್ಬಂದಿಯೊಂದಿಗೆ 176 ಪ್ರಯಾಣಿಕರಿದ್ದರು. ಭುವನೇಶ್ವರ ಹೊರಟಿದ್ದ ವಿಮಾನದಲ್ಲಿ ಒಟ್ಟು 238 ಮಂದಿ ಪ್ರಯಾಣಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next