Advertisement

ಪಾವಗಡ:  ಬೊಲೆರೊ – ದ್ವಿಚಕ್ರ ವಾಹನ ಅಪಘಾತ; ಇಬ್ಬರು ಸಾವು

04:02 PM Jun 18, 2022 | Team Udayavani |

ಪಾವಗಡ: ಬೊಲೆರೊ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಗಿ, ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ  ತಾಲ್ಲೂಕಿನ ಕೆಂಚಗಾನಹಳ್ಳಿ ಗೇಟ್ ಬಳಿ ಶನಿವಾರ ( ಜೂ.18 ) ರಂದು ನಡೆದಿದೆ.

Advertisement

ನೀಲಮ್ಮನಹಳ್ಳಿಯ ಶ್ರೀನಿವಾಸ್ (65), ಸೀನಪ್ಪ (57) ಮೃತರು. ನಾರಾಯಣ ನಾಯ್ಕ, ನರಸಿಂಹಪ್ಪ ಎಂಬುವರಿಗೆ ತೀವ್ರ ಗಾಯಗಳಾಗಿವೆ.

ದೊಡ್ಡಹಳ್ಳಿ ಕಡೆಯಿಂದ ಪಟ್ಟಣದ ಕಡೆಗೆ ಬರುತ್ತಿದ್ದ  ಬೊಲೆರೊ ಕಾರು ಮೂವರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಒಂದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ತೀವ್ರ ಗಾಯಗಳಾಗಿವೆ.

ಪಾವಗಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next