Advertisement

ಎಲ್‌ಓಸಿಯಲ್ಲಿ ಪಾಕ್‌ ಗುಂಡಿನ ದಾಳಿಗೆ ಇಬ್ಬರು ಬಲಿ; ಮೂವರಿಗೆ ಗಾಯ

11:40 AM May 13, 2017 | udayavani editorial |

ಶ್ರೀನಗರ : ಪಾಕಿಸ್ಥಾನ ಇಂದು ಶನಿವಾರ ಕೂಡ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಗೈದು ಗುಂಡಿನ ದಾಳಿ ನಡೆಸಿದ್ದು ಇದರ ಪರಿಣಾಮವಾಗಿ ಇಬ್ಬರು ಪೌರರು ಮಡಿದು ಇತರ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ನಿನ್ನೆ ಶುಕ್ರವಾರ ಪಾಕ್‌ ಸೇನೆ ನಡೆಸಿದ ಗಡಿ ಗುಂಡಿನ ದಾಳಿಗೆ ಓರ್ವ ಮಹಿಳೆ ಮೃತಪಟ್ಟಿದ್ದರು. 

Advertisement

ಪಾಕ್‌ ಸೇನೆ ಯದ್ವಾತದ್ವಾ ಮೋರ್ಟಾರ್‌ ಶೆಲ್ಲಿಂಗ್‌ ಹಾಗೂ ಗುಂಡಿನ ದಾಳಿ ನಡೆಸಿದ್ದು ಭಾರತೀಯ ಸೇನೆ ಇದಕ್ಕೆ ಅತ್ಯಂತ ಪರಿಣಾಮಕಾರಿ ಉತ್ತರವನ್ನು ಶಸ್ತ್ರಾಸ್ತ್ರಗಳ ಮೂಲಕವೇ ನೀಡಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. 

ಪಾಕ್‌ ಸೇನೆ ನೌಶೇರಾ ವಲಯದಲ್ಲಿ ನಮ್ಮ ಮುಂಚೂಣಿ ಠಾಣೆಗಳನ್ನು ಗುರಿ ಇರಿಸಿ ಮೋರ್ಟಾರ್‌ ಹಾಗೂ ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದೆ; ನಾವೂ ಅದಕೆ ತಕ್ಕುದಾದ ಉತ್ತರವನ್ನು ನೀಡಿದ್ದೇವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಲೆ| ಕ| ಮನೀಶ್‌ ಮೆಹ್ತಾ ತಿಳಿಸಿದ್ದಾರೆ.

2015 ಮತ್ತು 2016ರಲ್ಲಿ ಜಮ್ಮು ಕಾಶ್ಮೀರದ ಎಲ್‌ಓಸಿಯಲ್ಲಿ ಪಾಕ್‌ ನಡೆಸಿದ್ದ ಗಡಿ ಉಲ್ಲಂಘನೆ ದಾಳಿಯಲ್ಲಿ 23 ಭದ್ರತಾ ಸಿಬಂದಿಗಳು ಮೃತಪಟ್ಟಿರುವುದಾಗಿ ಗೃಹ ಸಚಿವಾಲಯವು ಆರ್‌ಟಿಐಗೆ ಉತ್ತರವಾಗಿ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next