ಚೆನ್ನೈ: ಕೊಯಮತ್ತೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತಿಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದೆ.
ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿ ಬಂಧಿತ ಆರೋಪಿಗಳು. ಇವರಿ ಬ್ಬರು ಸಹಿತ ಪ್ರಕರಣದಲ್ಲಿ ಇದುವರೆಗೂ ಒಟ್ಟು 11 ಮಂದಿಯನ್ನು ಎನ್‌ಐಎ ಬಂಧಿಸಿದೆ.
2022ರ ಫೆಬ್ರವರಿಯಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಕಾಡಿನ ಅಸನೂರ್ ಮತ್ತು ಕದಂಬೂರ್ ಪ್ರದೇಶದಲ್ಲಿ ಆರೋಪಿ ಗಳೆಲ್ಲ ಸಭೆ ಸೇರಿ ಭಯೋತ್ಪಾದನೆ ಕೃತ್ಯ ಕೈಗೊಳ್ಳುವ ನಿಟ್ಟಿನಲ್ಲಿ ಪಿತೂರಿ ನಡೆಸಿದ್ದರು. ಕೊಯಮತ್ತೂರಿನ ಕೊಟ್ಟೈ ಈಶ್ವರನ್ ದೇವದಾ§ನದ ಸಮೀಪ ಅ. 23ರಂದು ಕಾರಿನ ಒಳಗಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟಿಸಿ, ಆರೋಪಿ ಜಮೇಶ ಮುಬಿನ್(25) ಮೃತಪಟ್ಟಿದ್ದ.