Advertisement

ರಾಯಭಾರ ಕಚೇರಿ ದಾಖಲೆ ನಕಲು: ಕುವೈತ್‌ನಲ್ಲಿ ಆಂಧ್ರದ 7 ಮಂದಿ ಸೆರೆ

09:37 AM Nov 28, 2019 | Hari Prasad |

ಕುವೈತ್‌: ಭಾರತೀಯ ರಾಯಭಾರ ಕಚೇರಿಯ ದಾಖಲೆಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನಕಲು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕುವೈತ್‌ನಲ್ಲಿ ಏಳು ಮಂದಿ ಭಾರತೀಯರನ್ನು ಬಂಧಿಸಲಾಗಿದೆ. ಅವರೆ ಲ್ಲರೂ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ.

Advertisement

ಅವರ ಹಿಂದೆ ಬಲು ದೊಡ್ಡ ವಂಚನೆಯ ಜಾಲ ಇರುವ ಸಾಧ್ಯತೆ ಇದೆ ಎಂದು ಕುವೈತ್‌ನ ಪೊಲೀಸರು ತಿಳಿಸಿದ್ದಾರೆ. ದಾಖಲೆಗಳನ್ನು ನಕಲು ಮಾಡುವ ಜಾಲದ ಬಗ್ಗೆ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರೇ ವ್ಯವಹಾರ ಕುದುರಿಸುವವರಂತೆ ನಟಿಸಿ ಅವರ ಸೇವೆಯನ್ನು ಬಳಸಿಕೊಳ್ಳುವಂತೆ ನಂಬಿಸಿ ಅವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕವೇ ಈ ತಂಡ ಡೀಲ್‌ ಕುದುರಿಸುತ್ತಿತ್ತು. ಡ್ರೈವಿಂಗ್‌ ಲೈಸನ್ಸ್‌ ಅನ್ನು ನಕಲು ಮಾಡಿಕೊಡುವುದರಲ್ಲಿ ಈ ತಂಡ ಸಿದ್ಧಹಸ್ತವಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಆರಂಭದಲ್ಲಿ ಒಬ್ಬನನ್ನು ಸಾಕ್ಷ್ಯ ಸಮೇತ ದಸ್ತಗಿರಿ ಮಾಡಲಾಯಿತು. ಅನಂತರ ಆತ ನೀಡಿದ ಸುಳಿವಿನಿಂದ ಇಡೀ ತಂಡವನ್ನು ಬಂಧಿಸಲಾಗಿದೆ. ಕುವೈತ್‌ನ ಅಧಿಕಾರಿಗಳು ಈ ತಂಡ ನೀಡಿದ ವಿವಿಧ ಪ್ರಮಾಣ ಪತ್ರಗಳ ಸಿಂಧುತ್ವವನ್ನು ಪರಿಶೀಲಿಸಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next