Advertisement

ಎರಡು ಕೆರೆಗಳ ಉದ್ಘಾಟನೆ

09:39 AM Nov 27, 2017 | Team Udayavani |

ಜಪ್ಪಿನಮೊಗರು: ಕೆರೆಗಳು ಅಂತರ್ಜಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೂಲಕ ನಾವು ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಶಾಸಕ ಜೆ.ಆರ್‌. ಲೋಬೋ ಹೇಳಿದರು.

Advertisement

ಶಾಸಕ ಜೆ.ಆರ್‌.ಲೋಬೋ ಅವರ ವಿಶೇಷ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಯೋಜನೆಯಡಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಜಪ್ಪಿನಮೊಗರು ತಾರ್ದೊಲ್ಯ ಶ್ರೀ ಕೋರ್ದಬ್ಬು ದೈವಸ್ಥಾನದ ನಾಗಸನ್ನಿಧಿ ಬಳಿ ಇರುವ ಎರಡು ಕೆರೆಗಳ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇದರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ನನ್ನ ಕ್ಷೇತ್ರದಲ್ಲಿರುವ 8 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.

ತಾರ್ದೊಲ್ಯ ಶ್ರೀ ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಸದಾನಂದ ಆಳ್ವ, ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ, ಉಮೇಶ್‌ ಚಂದ್ರ, ಭುಜಂಗ ಶೆಟ್ಟಿ, ಜಗದೀಶ್‌ ರಾವ್‌, ವಿಶ್ವನಾಥ ಆಳ್ವ, ಮುತ್ತಣ್ಣ ಶೆಟ್ಟಿ, ತಾರ್ದೊಲ್ಯ ಶ್ರೀ ಕೋರªಬ್ಬು ಸೇವಾ ಸಮಿತಿ ಕಾರ್ಯದರ್ಶಿ ಯು. ಕರುಣಾಕರ ಶೆಟ್ಟಿ, ಕಾರ್ಪೊರೇಟರ್‌ಗಳಾದ ಪ್ರವೀಣ್‌ಚಂದ್ರ ಆಳ್ವ, ಜೆ. ಸುರೇಂದ್ರ, ಸಲೀಂ, ದಿನೇಶ್‌ ಅಂಚನ್‌, ಕೇಶವ ಅಂಗಡಿಮಾರ್‌, ಶೇಷಕೃಷ್ಣ, ನಾಗರಾಜ್‌, ಹರೀಶ್‌ ಶೆಟ್ಟಿ, ಸುಧಾಕರ್‌, ಸುನೀಲ್‌ ಕುಮಾರ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next