Advertisement

ಕೋಟ್ಯಧಿಪತಿಗಳಾದ ಕಾರ್ಮಿಕರು!

12:30 AM Dec 31, 2018 | Team Udayavani |

ಭೋಪಾಲ: ಮಧ್ಯ ಪ್ರದೇಶದ ಇಬ್ಬರು ಕಾರ್ಮಿಕರ ಹೊಸ ವರ್ಷದಲ್ಲಿ ಅದೃಷ್ಟ ಖುಲಾಯಿಸಿದೆ. ಪನ್ನಾ ವಜ್ರ ಗಣಿಯಲ್ಲಿ ಶೋಧ ನಡೆಸುತ್ತಿದ್ದ ಮೋತಿಲಾಲ್‌ ಹಾಗೂ ರಘುವೀರ್‌ ಪ್ರಜಾಪತಿಗೆ ಎರಡು ತಿಂಗಳ ಹಿಂದಷ್ಟೇ ಅತ್ಯಂತ ದೊಡ್ಡ ವಜ್ರದ ಹರಳು ಸಿಕ್ಕಿದೆ. ಇದನ್ನು 2.5 ಕೋಟಿ ರೂ.ಗೆ ಹರಾಜು ಹಾಕಲಾಗಿದೆ. ಈ ವಜ್ರ 42.9 ಕ್ಯಾರಟ್‌ ಇತ್ತು. ಶುಕ್ರವಾರ ನಡೆಸಿದ ಹರಾಜಿನಲ್ಲಿ ಪ್ರತಿ ಕ್ಯಾರಟ್‌ಗೆ 6 ಲಕ್ಷ ರೂ. ಮೌಲ್ಯ ಕಟ್ಟಲಾಗಿದೆ.

Advertisement

ಝಾನ್ಸಿ ಮೂಲದ ಆಭರಣಕಾರ ಮತ್ತು ಓರ್ವ ಬಿಎಸ್‌ಪಿ ನಾಯಕ ಈ ವಜ್ರವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ ಎಂದು ಪನ್ನಾದ ವಜ್ರ ಗಣಿಯ ಅಧಿಕಾರಿ ಸಂತೋಷ್‌ ಸಿಂಗ್‌ ಹೇಳಿದ್ದಾರೆ. ಈಗಾಗಲೇ ಕಾರ್ಮಿಕರಿಗೆ ಶೇ.20ರಷ್ಟು ಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಹರಾಜು ಪಡೆದವರು ವಜ್ರವನ್ನು ಸ್ವಾಧೀನಪಡಿಸಿಕೊಂಡ ಅನಂತರ ಪಾವತಿ ಮಾಡುವರು. ತೆರಿಗೆ ಹಾಗೂ ಇತರ ಶುಲ್ಕಗಳನ್ನು ಕಳೆದು 2.30 ಕೋಟಿ ರೂ. ಇಬ್ಬರಿಗೆ ಸಿಗಲಿದೆ. ಮೋತಿಲಾಲ್‌ ಹಾಗೂ ರಘುವೀರ್‌ ಇದನ್ನು ಸಮಾನವಾಗಿ ಹಂಚಿಕೊಳ್ಳಲಿದ್ದು, ತಮ್ಮ ಮಕ್ಕಳ ಶಿಕ್ಷಣಕ್ಕೆ ಹಾಗೂ ಸಾಲ ಮರು ಪಾವತಿಗೆ ವೆಚ್ಚ ಮಾಡಲಿದ್ದಾರೆ.

ಪನ್ನಾ ವಜ್ರದ ಗಣಿಯಲ್ಲಿ ಹಲವು ದಶಕಗಳಿಂದಲೂ ವಾಣಿಜ್ಯಿಕವಾಗಿ ವಜ್ರ ಉತ್ಖನನ ಮಾಡುತ್ತಿಲ್ಲ. ಆದರೆ ಇದು ಸಾರ್ವಜನಿಕರಿಗೆ ಮುಕ್ತ ವಾಗಿದ್ದು, ಯಾರು ಬೇಕಾ ದರೂ ಇಲ್ಲಿ ಅಗೆದು ವಜ್ರವನ್ನು ತೆಗೆಯಬಹುದು. ಆದರೆ ಇದನ್ನು ಪನ್ನಾ ವಜ್ರ ನಿರ್ವಹಣೆ ಇಲಾಖೆಗೆ ನೀಡಬೇಕಿರುತ್ತದೆ. ಹೀಗೆ ಸಿಕ್ಕ ವಜ್ರವನ್ನು ಇಲಾಖೆಯು ಹರಾಜು ಹಾಕುತ್ತದೆ. ಈ ಹಿಂದೆ 1961ರಲ್ಲಿ 44.55 ಕ್ಯಾರಟ್‌ ವಜ್ರ ಸಿಕ್ಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next