Advertisement

Egypt ;ಅಲೆಕ್ಸಾಂಡ್ರಿಯಾದಲ್ಲಿ ಗುಂಡಿನ ದಾಳಿ: ಇಬ್ಬರು ಇಸ್ರೇಲಿ ಪ್ರವಾಸಿಗರ ಮೃತ್ಯು

08:49 PM Oct 08, 2023 | Team Udayavani |

ಅಲೆಕ್ಸಾಂಡ್ರಿಯಾ: ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ನಗರದಲ್ಲಿ ಭಾನುವಾರ ಪೊಲೀಸ್ ಅಧಿಕಾರಿಯೊಬ್ಬ ಇಸ್ರೇಲಿ ಪ್ರವಾಸಿಗರ ಗುಂಪಿನ ಮೇಲೆ ಗುಂಡು ಹಾರಿಸಿದ ನಂತರ ಕನಿಷ್ಠ ಇಬ್ಬರು ಇಸ್ರೇಲಿಗಳು ಮತ್ತು ಒಬ್ಬ ಈಜಿಪ್ಟ್‌ನ ಪ್ರವಾಸಿ ಗೈಡ್ ಹತ್ಯೆಗೀಡಾಗಿದ್ದಾರೆ.

Advertisement

ಶನಿವಾರ ಬೆಳಗ್ಗೆಯಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಹಮಾಸ್ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅಲೆಕ್ಸಾಂಡ್ರಿಯಾದ ಪಾಂಪೆಸ್ ಪಿಲ್ಲರ್ ಸೈಟ್‌ನಲ್ಲಿ ನಡೆದ ದಾಳಿಯಲ್ಲಿ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ದಾಳಿಯ ನಂತರದ ದೃಶ್ಯಗಳು ಸೆರೆಯಾಗಿವೆ, ಕನಿಷ್ಠ ಮೂರು ಆಂಬ್ಯುಲೆನ್ಸ್‌ಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಧಾವಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next