ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನ ಪಿಹಾ ಬೀಚ್‌ನಲ್ಲಿ ಈಜಲು ಹೋದ ಇಬ್ಬರು ಭಾರತೀಯರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಮೃತರನ್ನು ಗುಜರಾತ್‌ನ ಅಹಮದಾಬಾದ್ ಮೂಲದ ಸೌರಿನ್ ನಯನ್ ಕುಮಾರ್ ಪಟೇಲ್(28) ಮತ್ತು ಅನ್ಶುಲ್ ಶಾ(31) ಎಂದು ಗುರುತಿಸಲಾಗಿದೆ.
ಮೃತ ಇಬ್ಬರು ಹಾಗೂ ಅಪೂರ್ವ್ ಮೋದಿ ಸೇರಿದಂತೆ ಮೂವರು ಸ್ನೇಹಿತರು ಪ್ರವಾಸದ ಭಾಗವಾಗಿ ಪಿಹಾ ಬೀಚ್‌ಗೆ ತೆರಳಿದ್ದರು. ಇವರಿಗೆ ಈಜು ಬರುತ್ತಿರಲಿಲ್ಲ. ಸಮುದ್ರದ ನೀರಿನಲ್ಲಿ ಆಟವಾಡುತ್ತಿದಾಗ ದೊಡ್ಡ ತೆರೆ ಬಂದು ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಅಪೂರ್ವ್ ಬಚಾವಾಗಿದ್ದಾರೆ.
ಭಾರತೀಯ ವಿದ್ಯಾರ್ಥಿಗೆ ಗುಂಡು
ಅಮೆರಿಕದ ಚಿಕಾಗೊದಲ್ಲಿ ಭಾನುವಾರ ನಡೆದ ದರೋಡೆ ಯತ್ನದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದೆ. ದರೋಡೆಕಾರರು ತೆಲಂಗಾಣದ ಕೆ.ಸಾಯಿ ಚರಣ್ ಮೇಲೆ ಗುಂಡು ಹಾರಿಸಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.